ಭಜ್ಜಿ ತಂಡಲ್ಲಿಲ್ಲ ವಿರಾಟ್ ಕೊಹ್ಲಿ.. ಟರ್ಬನೇಟರ್ ತಂಡಕ್ಕೆ ಧೋನಿ ನಾಯಕ..!
ಟೀಮ್ ಇಂಡಿಯಾದ ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು. ಮೈದಾನದಲ್ಲಿ ಭಜ್ಜಿ ಅಂತಲೇ ಫೇಮಸ್. ಆದರೆ ಹರ್ಭಜನ್ ಸಿಂಗ್ ತಮ್ಮ ಸಾರ್ವಕಾಲಿಕ ಟಿ20 ತಂಡ ಕೇವಲ ಮೂರೇ ಮೂರು ಭಾರತೀಯ ಕ್ರಿಕೆಟಿಗರಿಗೆ ಸ್ಥಾನ ನೀಡಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಗೆ ತಂಡದಲ್ಲಿ ಸ್ಥಾನ ನೀಡದೇ ಇರುವುದು ಅಚ್ಚರಿ ಮೂಡಿಸಿದೆ.
ಹರ್ಭಜನ್ XI ತಂಡದಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿದ್ದಾರೆ. ವಿಕೆಟ್ ಕೀಪಿಂಗ್ ಜವಾಬ್ದಾರಿಯೂ ಮಾಹಿಯದ್ದೇ. ಆರಂಭಿಕರಾಗಿ ಸ್ಪೋಟಕ ಓಪನರ್ ರೋಹಿತ್ ಶರ್ಮಾ ಹಾಗೂ ವಿಂಡೀಸ್ ದೈತ್ಯ ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 3ನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಅವರಿಗೆ ಸ್ಥಾನ ನೀಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಆಲ್ರೌಂಡರ್ ಶೇನ್ ವಾಟ್ಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, 5ನೇ ಕ್ರಮಾಂಕವನ್ನು ಎಬಿ ಡಿವಿಲಿಯರ್ಸ್ಗೆ ನೀಡಿದ್ದಾರೆ. ಹಾಗೆಯೇ 6ನೇ ಕ್ರಮಾಂಕದಲ್ಲಿ ಧೋನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
7 ಮತ್ತು 8ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ನ ಆಲ್ರೌಂಡರ್ಗಳಾದ ಡ್ವೇನ್ ಬ್ರಾವೋ ಹಾಗೂ ಕೀರನ್ ಪೊಲಾರ್ಡ್ ಅವರನ್ನು ಹರ್ಭಜನ್ ಸಿಂಗ್ ಆಯ್ಕೆ ಮಾಡಿರುವುದು ವಿಶೇಷ. ಇನ್ನು ಬೌಲರುಗಳ ವಿಭಾಗದಲ್ಲಿ ಸ್ಪಿನ್ನರ್ ಆಗಿ ಸುನೀಲ್ ನರೈನ್ ಇದ್ದರೆ, ವೇಗಿಗಳಾಗಿ ಲಸಿತ್ ಮಾಲಿಂಗ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಹರ್ಭಜನ್ ಸಿಂಗ್ T20 XI : ರೋಹಿತ್ ಶರ್ಮಾ, ಕ್ರಿಸ್ ಗೇಲ್, ಜೋಸ್ ಬಟ್ಲರ್, ಶೇನ್ ವಾಟ್ಸನ್, ಎಬಿ ಡಿವಿಲಿಯರ್ಸ್, ಎಂಎಸ್ ಧೋನಿ (ನಾಯಕ), ಡ್ವೇನ್ ಬ್ರಾವೋ, ಕೀರನ್ ಪೊಲಾರ್ಡ್, ಸುನೀಲ್ ನರೈನ್, ಲಸಿತ್ ಮಾಲಿಂಗ, ಜಸ್ಪ್ರೀತ್ ಬುಮ್ರಾ