ನೆಟ್ಸ್ ನಲ್ಲಿ ಬೌಲಿಂಗ್ ಆರಂಭಿಸಿದ ಹಾರ್ಧಿಕ್ ಪಾಂಡ್ಯಾ
ದುಬೈ : ಐಸಿಸಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಸೋಲುಂಡಿರುವ ಟೀಂ ಇಂಡಿಯಾ, ಗಾಯಗೊಂಡ ಹುಲಿಯಂತಾಗಿದೆ.
ಟೂರ್ನಿಯಲ್ಲಿ ಉಳಿಯುವುದರ ಜೊತೆಗೆ ಗೆಲುವಿನ ಲಯಕ್ಕೆ ಬರಲು ಭಾರತದ ಗನ್ ಗಳು ರೆಡಿಯಾಗ್ತಿದ್ದಾರೆ.
ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಟೀಂ ಇಂಡಿಯಾ ಕಾಯುತ್ತಿದೆ. ಈ ಮಧ್ಯೆ ಟೀಂ ಇಂಡಿಯಾಗೆ ಗುಡ್ ನ್ಯೂಸ್ ವೊಂದು ಸಿಕ್ಕಿದೆ.
ಅದೆನಂದರೇ ಪಾಕ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಈ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.
ಹೌದು..! ಟೀಂ ಇಂಡಿಯಾದ ರಾಕ್ ಸ್ಟಾರ್ ಆಲ್ ರೌಂಡರ್ ಎಂದೇ ಖ್ಯಾತಿ ಪಡೆದಿರುವ ಹಾರ್ದಿಕ್ ಪಾಂಡ್ಯಾ ಟೀಂ ಇಂಡಿಯಾದ ಪ್ರಮುಖ ಆಟಗಾರರಲ್ಲಿ ಒಬ್ಬರು.
ತಮ್ಮ ವಿಸ್ಫೋಟಕ ಬ್ಯಾಟಿಂಗ್ ನಿಂದಲೇ ಪಂದ್ಯದ ಗತಿಯನ್ನ ಬದಲಿಸಬಲ್ಲ ಆಟಗಾರ. ಸೋಲೋ ಪಂದ್ಯಗಳನ್ನು ಒಂಟಿ ಕೈಯಲ್ಲಿ ಗೆಲ್ಲಿಸಿಕೊಡುವ ತಾಕತ್ತು ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಸಾಮಥ್ರ್ಯಕ್ಕಿದೆ.
ಜೊತೆಗೆ ಇವರ ಬೌಲಿಂಗ್ ಕೂಡ ತಂಡಕ್ಕೆ ಪ್ಲಸ್ ಪಾಯಿಂಟ್. ಆದ್ರೆ ಹಾರ್ದಿಕ್ ಪಾಂಡ್ಯ ಕೆಲ ದಿನಗಳಿಂದ ಇಂಜ್ಯೂರಿ ಸಮಸ್ಯೆಯಿಂದ ಬಳಲುತ್ತಿದ್ದು, ಬೌಲಿಂಗ್ ಮಾಡುತ್ತಿಲ್ಲ. ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚುತ್ತಿಲ್ಲ.
ಆದರೂ ಅವರಿಗೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಲಾಗಿತ್ತು.
ಆದರೇ ಬ್ಯಾಟಿಂಗ್ ಮಾಡುವ ವೇಳೆಯಲ್ಲಿ ಹಾರ್ದಿಕ್ ಪಾಂಡ್ಯಾ ಭುಜದ ನೋವಿಗೆ ತುತ್ತಾಗಿ ಗಾಯಗೊಂಡಿದ್ದರು. ಹೀಗಾಗಿ ಆ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ ಕ್ರೀಸ್ ಗೆ ಇಳಿಯಲೇ ಇಲ್ಲ.
ಇದು ಸಾಮಾನ್ಯವಾಗಿಯೇ ಟೀಂ ಇಂಡಿಯಾದ ಹಿನ್ನೆಡೆಗೆ ಕಾರಣವಾಗಿತ್ತು. ಆದ್ರೆ ಇದೀಗ ಹಾರ್ದಿಕ್ ಪಾಂಡ್ಯಾ ಸಂಪೂರ್ಣವಾಗಿ ಫಿಟ್ ಆಗಿದ್ದಾರೆ.
ಸದ್ಯ ನೆಟ್ ನಲ್ಲಿ ಬೌಲಿಂಗ್ ಅಭ್ಯಾಸ ಆರಂಭ ಮಾಡಿದ್ದಾರೆ. ಹೀಗಾಗಿ ಟೀಂ ಇಂಡಿಯಾಗೆ ಮತ್ತೊಂದು ಬತ್ತಳಿಕೆ ಸಿಕ್ಕಿದೆ.