ಪರ್ಚೆಸ್ ಮಾಡಿದ್ದಾ ? ಗಿಫ್ಟ್ ಸಿಕ್ಕಿದ್ದಾ ? ಏನಿದು ಪಾಂಡ್ಯ ನಿನ್ನ ದುಬಾರಿ ವಾಚ್ ಮಹಿಮೆ..!

1 min read
hardik pandya team india saakshatv

ಪರ್ಚೆಸ್ ಮಾಡಿದ್ದಾ ? ಗಿಫ್ಟ್ ಸಿಕ್ಕಿದ್ದಾ ? ಏನಿದು ಪಾಂಡ್ಯ ನಿನ್ನ ದುಬಾರಿ ವಾಚ್ ಮಹಿಮೆ..!hardik pandya team india saakshatvಹಾರ್ದಿಕ್ ಪಾಂಡ್ಯ.. ಟೀಮ್ ಇಂಡಿಯಾದ ನಂಬಲು ಅಸಾಧ್ಯವಾಗಿರುವ ಆಲ್ ರೌಂಡರ್. ಅದು ಬೌಲಿಂಗ್ ಇರಲಿ, ಬ್ಯಾಟಿಂಗ್ ಇರಲಿ.. ಸವಾಲುಗಳು ಎಷ್ಟೇ ಇರಲಿ… ಹಾರ್ದಿಕ್ ಪಾಂಡ್ಯಗೆ ಟೆನ್ಷನ್ ಆಗುವುದೇ ಇಲ್ಲ. ಧೈರ್ಯದಿಂದಲೇ ಆಡುವ ಹಾರ್ದಿಕ್ ಪಾಂಡ್ಯ ಹಲವು ಪಂದ್ಯಗಳನ್ನು ಏಕಾಂಗಿಯಾಗಿಯೇ ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾಗಿ ಟೀಮ್ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಅಂದ್ರೆ ಏನೋ ಒಂಥರಾ ನಂಬಿಕೆ.
ಆದ್ರೆ ಹಾರ್ದಿಕ್ ಪಾಂಡ್ಯ ಈಗ ಫಾರ್ಮ್ ನಲ್ಲಿಲ್ಲ. ಅಷ್ಟೇ ಅಲ್ಲ ಗಾಯದ ಸಮಸ್ಯೆ ಬೇರೆ ಇದೆ. ಆದ್ರೂ ಟಿ-20 ವಿಶ್ವಕಪ್ ನಲ್ಲಿ ತಂಡದಲ್ಲಿ ಆಲ್ ರೌಂಡರ್ ಕೋಟಾದಲ್ಲಿ ಹೇಗೆ ಸ್ಥಾನ ಪಡೆದುಕೊಂಡ್ರೂ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಆದ್ರೆ ಈಗ ಇದು ಹಳೆಯ ವಿಷ್ಯ. ಆಟಗಾರ ಫಾರ್ಮ್ ಕಂಡುಕೊಳ್ಳುವುದು, ಫಾರ್ಮ್ ಕಳೆದುಕೊಳ್ಳುವುದು ಆಟದಲ್ಲಿ ಸಾಮಾನ್ಯ.
ಆದ್ರೆ ಈಗ ಹಾರ್ದಿಕ್ ಪಾಂಡ್ಯ ಬ್ಯಾಕ್ ಟು ಬ್ಯಾಕ್ ಸುದ್ದಿಯಲ್ಲಿದ್ದಾರೆ. ಹಾಗಂತ ಆಟದ ಜೊತೆ ಹಾರ್ದಿಕ್ ಪಾಂಡ್ಯ ವಿವಾದ, ಗಾಸಿಪ್ ಗಳಲ್ಲೂ ಸುದ್ದಿಯಾಗಿರೋದು ಹೊಸದೇನಲ್ಲ. ಅದೆಲ್ಲಾ ಮಾಸುವ ಮುನ್ನವೇ ಈಗ ಹೊಸ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ.
ಮೊನ್ನೆ ಮೊನ್ನೆಯಷ್ಟೇ ಭೂಗತ ಪಾತಕಿಯ ಪತ್ನಿ ಹಾರ್ದಿಕ್ ಪಾಂಡ್ಯ ಮೇಲೆ ಅತ್ಯಚಾರದ ಆರೋಪವನ್ನು ಹೊರಿಸಿದ್ದರು.
ಅದರ ಬೆನ್ನಲ್ಲೇ ಇದೀಗ ಹಾರ್ದಿಕ್ ಪಾಂಡ್ಯ ಮುಂಬೈ ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ದುಬಾರಿ ಬೆಲೆಯ ವಾಚ್ ಅನ್ನು ಹಾರ್ದಿಕ್ ಪಾಂಡ್ಯ ದುಬೈ ನಲ್ಲಿ ಖರೀದಿ ಮಾಡಿದ್ದರು. ಆದ್ರೆ ಅದಕ್ಕೆ ಬಿಲ್ ಇಲ್ಲ. ಹೀಗೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಹಾರ್ದಿಕ್ ಪಾಂಡ್ಯ ಅವರ ದುಬಾರಿ ಬೆಲೆಯ ಎರಡು ವಾಚ್ ಗಳು ಈಗ ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿದೆ.
hardik pandya team india saakshatvಈಗಾಗಲೇ ಹಾರ್ದಿಕ್ ಪಾಂಡ್ಯ ಅವರು ಐದು ಕೋಟಿಯ ದುಬಾರಿ ಬೆಲೆಯ ವಾಚ್ ಖರೀದಿಸಿದ್ದಾರೆ ಅಂತ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿದೆ.
ಆದ್ರೆ ಇದಕ್ಕೆ ಹಾರ್ದಿಕ್ ಪಾಂಡ್ಯ ಸ್ಪಷ್ಟನೇ ಕೊಟ್ಟಿದ್ದಾರೆ. ಅದು ಐದು ಕೋಟಿಯ ವಾಚ್ ಅಲ್ಲ. ಅದರ ಬೆಲೆ 1.5 ಕೋಟಿ ರೂಪಾಯಿ. ಹಾಗೇ ಮುಂಬೈ ಕಸ್ಟಮ್ಸ್ ಅಧಿಕಾರಿಗಳ ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ.
ಹಾಗಂತ ದುಬಾರಿ ಬೆಲೆಯ ವಾಚ್ ಖರೀದಿಸಿ ಏರ್ ಪೋರ್ಟ್ ನಲ್ಲಿ ಸಿಲುಕಿಕೊಂಡಿರುವುದು ಕೂಡ ಪಾಂಡ್ಯ ಬ್ರದರ್ಸ್ ಗೆ ಹೊಸದೇನೂ ಅಲ್ಲ. ಈ ಹಿಂದೆ ಹಾರ್ದಿಕ್ ಪಾಂಡ್ಯ ಸಹೋದರ ಕೃನಾಲ್ ಪಾಂಡ್ಯ ಕೂಡ ಮುಂಬೈ ವಿಮಾನ ನಿಲ್ದಾಣದಲ್ಲಿ ಸಿಕ್ಕಹಾಕೊಂಡಿದ್ದರು.
ಒಟ್ಟಿನಲ್ಲಿ ಹಾರ್ದಿಕ್ ಪಾಂಡ್ಯ ಈಗ ಮತ್ತೆ ವಿವಾದದ ಸುದ್ದಿಗೆ ಆಹಾರವಾಗುತ್ತಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಬಲೆಗೆ ಬೀಳುತ್ತೇನೆ ಅನ್ನೋದು ಗೊತ್ತಿದ್ರೂ ಬಿಲ್ ಇಲ್ಲದೇ ದುಬಾರಿ ಬೆಲೆಯ ವಾಚ್ ಖರೀದಿ ಹೇಗೆ ಮಾಡಿದ್ರು ? ಅಥವಾ ಯಾರಾದ್ರೂ ಉಡುಗೊರೆಯಾಗಿ ನೀಡಿದ್ದಾರಾ ? ಹೀಗೆ ಹಲವು ಸಂಶಯಗಳು ಈಗ ಹಾರ್ದಿಕ್ ಪಾಂಡ್ಯ ಅವರನ್ನು ಸುತ್ತುತ್ತಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd