Harmanpreet Kaur : ಮಿಥಾಲಿ ವಿದಾಯ.. ಹರ್ಮನ್ ಪ್ರಿತ್ ಕೌರ್ ನೂತನ ನಾಯಕಿ
ಭಾರತದ ಹಿರಿಯ ಮಹಿಳಾ ಕ್ರಿಕೆಟ್ ಆಟಗಾರ್ಟಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಬುಧವಾರ ನಿವೃತ್ತಿ ಘೋಷಿಸಿದ್ದಾರೆ.
ಇದರಿಂದಾಗಿ ಭಾರತ ಮಹಿಳಾ ತಂಡದ ನೂತನ ಸಾರಥಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿತ್ತು.
ಈ ಪೈಕಿ ಹರ್ಮನ್ಪ್ರೀತ್ ಕೌರ್ ಜೊತೆಗೆ ಸ್ಮೃತಿ ಮಂಧಾನ ಹೆಸರುಗಳು ಹೆಚ್ಚಾಗಿ ಕೇಳಿಬರುತ್ತಿದ್ದವು.
ಆದ್ರೆ ಈ ಹಿಂದೆ ನಾಯಕಿಯಾಗಿ ಅನುಭವ ಹೊಂದಿರುವ ಹರ್ಮನ್ಪ್ರೀತ್ ಅವರನ್ನು ಬಿಸಿಸಿಐ ಮಹಿಳಾ ತಂಡದ ನಾಯಕಿಯಾಗಿ ಆಯ್ಕೆ ಮಾಡಿದೆ.
ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾ ಮಹಿಳಾ ನಾಯಕಿಯಾಗಿ ಹರ್ಮನ್ಪ್ರೀತ್ ಕೌರ್ ಅವರನ್ನು ನೇಮಿಸಲಾಗಿದೆ.
ಜೂನ್ 23 ರಿಂದ ಶ್ರೀಲಂಕಾ ಪ್ರವಾಸದಲ್ಲಿ ಭಾರತ ಮಹಿಳಾ ತಂಡ ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ನಾಲ್ಕು ವರ್ಷಗಳ ಕಾಲ ಟಿ20 ನಾಯಕಿಯಾಗಿರುವ ಹರ್ಮನ್ಪ್ರೀತ್ ಕೌರ್ ಮಿಥಾಲಿ ರಾಜ್ ಅನುಪಸ್ಥಿತಿಯಲ್ಲಿ ಕೆಲವು ಪಂದ್ಯಗಳಿಗೆ ಏಕದಿನ ನಾಯಕಿಯಾಗಿದ್ದರು.
ಇದೀಗ ಮಿಥಾಲಿ ವಿದಾಯ ಘೋಷಿಸಿದ್ದು, ಏಕದಿನ ತಂಡದ ನಾಯಕಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.