ದೌರ್ಜನಕ್ಕೆ ಒಳಗಾದ ಮಹಿಳೆಯರ ನೆರವಿಗಾಗಿ ಸಹಾಯವಾಣಿ..!
ನವದೆಹಲಿ : ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಇನ್ನೂವರೆಗೂ ಅನೇಕರಿಗೆ ನ್ಯಾಯ ಸಿಕ್ಕಿಲ್ಲ. ಇನ್ನೂ ಹಲವರು ಹೆದರಿಕೆಯಿಂದ , ಮನೆಯರ ಒತ್ತಡ ಹಾಗೂ ನಾನಾ ಕಾರಣಗಳಿಂದ ಪ್ರಕರಣಗಳನ್ನೂ ಸಹ ದಾಖಲಿಸಿಲ್ಲ.. ಹೀಗಾಗಿಯೇ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ನೆರವಿಗಾಗಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಸಹಾಯವಾಣಿಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ.
ರಾಷ್ಡ್ರೀಯ ಮಹಿಳಾ ಆಯೋಗ ಸ್ಥಾಪಿಸಿರುವ ಈ ಸಹಾಯವಾಣಿಗೆ (ಸಹಾಯವಾಣಿ ಸಂಖ್ಯೆ 7827170170) ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಸಂಕಷ್ಟದಲ್ಲಿರುವ ಮಹಿಳೆಯರ ನೆರವಿಗೆ ಸರ್ಕಾರ ಹಾಗೂ ಆಯೋಗ ಸದಾ ಸಿದ್ಧ ಎಂಬ ಸಂದೇಶವನ್ನು ಈ ಸಹಾಯವಾಣಿ ರವಾನಿಸಿದೆ ಎಂದು ತಿಳಿಸಿದ್ದಾರೆ.








