ಮೃತ ಹಿಂದು ಕಾರ್ಯಕರ್ತನ ಮಗನ ಓದಿನ ಜವಾಬ್ದಾರಿ ವಹಿಸಿಕೊಂಡ ಹರ್ಷ ಸಹೋದರಿ
ಚಿಕ್ಕಮಗಳೂರು: ಶಿವಮೊಗ್ಗದಲ್ಲಿ ಕೊಲೆಯಾದ ಬಜರಂಗಳ ಕಾರ್ಯಕರ್ತ ಹರ್ಷ ಅವರ ಸಹೋದರಿ ಅಶ್ವಿನಿ, 2015ರಲ್ಲಿ ಶಿವಮೊಗ್ಗದಲ್ಲೇ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ವಿಶ್ವನಾಥ್ ಶೆಟ್ಟಿ ಅವರ ಮಗ ಯಶಸ್ ಓದಿನ ಜವಾಬ್ದಾರಿಯನ್ನ ವಹಿಸಿಕೊಂಡಿದ್ದಾರೆ.
8ನೇ ತರಗತಿಯಲ್ಲಿ ಓದುತ್ತಿರುವ ಯಶಸ್ ಮೃತ ವಿಶ್ವನಾಥ್ ಶೆಟ್ಟಿ ಪತ್ನಿಯ ತಾಯಿಯ ಜತೆ ವಾಸವಾಗಿದ್ದಾನೆ. ಇಂದು ಯಶಸ್ ಮನೆಗೆ ಭೇಟಿ ನೀಡಿದ ಮೃತ ಹರ್ಷ ಸಹೋದರಿ ಅಶ್ವಿನಿ ಬಾಲಕನ ಓದಿನ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಜೊತೆಗೆ ಬೇರೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ನಾನೇ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
2015ರ ಫೆಬ್ರವರಿ 19 ರಂದು ಶಿವಮೊಗ್ಗದಲ್ಲಿ ನಡೆದ ಪಿ.ಎಫ್.ಐ ಸಮಾವೇಶ ಮುಗಿಸಿಕೊಂಡು ಹೋಗುವಾಗ ಶಿವಮೊಗ್ಗ ತಾಲೂಕಿನ ಗಾಜನೂರು ಸಮೀಪ ದುಷ್ಕರ್ಮಿಗಳು ವಿಶ್ವನಾಥ್ ಶೆಟ್ಟಿಯನ್ನ ಕೊಲೆ ಮಾಡಿದ್ದರು. ವಿಶ್ವನಾಥ್ ಶೆಟ್ಟಿ ಸಾವಿನ ಕೆಲ ತಿಂಗಳ ಬಳಿಕ ಪತ್ನಿ ಕೂಡ ಸಾವನ್ನಪ್ಪಿದ್ದರು. ವಿಶ್ವನಾಥ್ ಶೆಟ್ಟಿ ಪತ್ನಿಯ ತಂಗಿ ಕೂಲಿ ಕೆಲಸ ಮಾಡಿಕೊಂಡು ಯಶಸ್ ಹಾಗೂ ಅಜ್ಜಿಯನ್ನ ನೋಡಿಕೊಳ್ಳುತ್ತಿದ್ದಾರೆ.