ಮತ್ತೆ ಆರ್ಸಿಬಿ ತಂಡದ ಪರವೇ ಆಡುವೆ : ಹರ್ಷಲ್ ಪಟೇಲ್
ಮುಂದಿನ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಬಗ್ಗೆ ಬೌಲರ್ ಹರ್ಷಲ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ ಹರ್ಷಲ್ ಪಟೇಲ್ ಐಪಿಎಲ್-2021 ರ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
15 ಇನ್ನಿಂಗ್ಸ್ಗಳಲ್ಲಿ 32 ವಿಕೆಟ್ ಪಡೆದ ಹರ್ಷಲ್, ಪರ್ಪಲ್ ಕ್ಯಾಪ್ ಅನ್ನು ಪಡೆದರು. ಮೆಗಾ ಹರಾಜು ಹಿನ್ನೆಲೆಯಲ್ಲಿ ಆರ್ ಸಿಬಿ ಫ್ರಾಂಚೈಸಿ ಅವರನ್ನು ಪರಿಗಣಿಸಲಿಲ್ಲ.
ಸ್ಟಾರ್ ಬ್ಯಾಟ್ಸ್ ಮನ್, ಮಾಜಿ ನಾಯಕ ವಿರಾಟ್ ಕೊಹ್ಲಿ (15 ಕೋಟಿ ರೂ.), ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ (11 ಕೋಟಿ ರೂ.) ಮತ್ತು ಸಿರಾಜ್ (7 ಕೋಟಿ ರೂ.) ಅವರನ್ನು ಆರ್ ಸಿಬಿ ಮ್ಯಾನೇಜ್ ಮೆಂಟ್ ರಿಟೈನ್ಡ್ ಮಾಡಿಕೊಂಡಿದೆ.
ಗರಿಷ್ಠ ನಾಲ್ವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದ್ದರೂ ಆರ್ಸಿಬಿ ಹರ್ಷಲ್ ಪಟೇಲ್ ಅವರನ್ನು ರಿಟೈನ್ಡ್ ಮಾಡಿಕೊಂಡಿಲ್ಲ. ಹೀಗಾಗಿ ಅವರು ಮೆಗಾ ಹರಾಜಿಗೆ ಬರಲಿದ್ದಾರೆ.
ಈ ಸಂದರ್ಭದಲ್ಲಿ ಕ್ರಿಕೆಟ್ ಟ್ರಾಕರ್ ಗೆ ನೀಡಿದ ಸಂದರ್ಶನದಲ್ಲಿ ಹರ್ಷಲ್ ಪಟೇಲ್ ಕೆಲವು ಆಸಕ್ತಿದಾಯಕ ಹೇಳಿಕೆಗಳನ್ನು ನೀಡಿದ್ದಾರೆ. ಆರ್ಸಿಬಿ ಅವರನ್ನು ಖರೀದಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ನನ್ನನ್ನು ರಿಟೈನ್ಡ್ ಮಾಡಿಕೊಂಡಿಲ್ಲ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಆರ್ ಸಿಬಿ ಕ್ರಿಕೆಟ್ ನಿರ್ದೇಶಕ ಮೈಕ್ ಹೆಸ್ಸನ್ ನನಗೆ ಕರೆ ಮಾಡಿದರು. ಪರ್ಸ್ನಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ನನ್ನನ್ನು ಬಿಟ್ಟಿರುವುದಾಗಿ ತಿಳಿಸಿದರು.
ಹೀಗಾಗಿ ಆರ್ ಸಿಬಿ ಪ್ರಾಂಚೈಸಿ ಈ ಬಾರಿಯ ಮೆಗಾ ಹರಾಜಿನಲ್ಲಿ ನನ್ನನ್ನು ಖರೀದಿಸಲಿದೆ. ನಾನು ಮತ್ತೊಮ್ಮೆ RCB ಪರ ಆಡಲು ಎದುರು ನೋಡುತ್ತಿದ್ದೇನೆ.
ಏಕೆಂದರೆ… ಐಪಿಎಲ್-2021 ಸೀಸನ್ನಲ್ಲಿ ಬೆಂಗಳೂರು ತಂಡಕ್ಕಾಗಿ ಆಡುತ್ತಿರುವುದು ನನ್ನ ವೃತ್ತಿಜೀವನವನ್ನು ಮಾತ್ರವಲ್ಲದೆ ನನ್ನ ಜೀವನದ ಪ್ರಮುಖ ಘಟ್ಟವಾಗಿದೆ ಎಂದಿದ್ದಾರೆ.