ಚಂದನವನದ ನಟಿ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ಭುವನ್ ತಮ್ಮ ಮೊದಲ ಮಗುವಿನೊಂದಿಗೆ ಕೊಲ್ಲೂರು ಮೂಕಾಂಬಿಕೆ ತಾಯಿಯ ದರ್ಶನ ಪಡೆದಿದ್ದಾರೆ.
ಚೊಚ್ಚಲ ಮಗುವಿನ ಆರೈಕೆಯಲ್ಲಿರುವ ದಂಪತಿ, ಈಗ ತಾಯಿಯ ದರ್ಶನ ಪಡೆದಿದ್ದಾರೆ. ಹರ್ಷಿಕಾ ಮಗು ಹುಟ್ಟುವುದಕ್ಕಿಂತಲೂ ಮೊದಲು ಕೊಲ್ಲೂರು ಮೂಕಾಂಬಿಕೆಗೆ ಹರಕೆ ಹೊತ್ತಿದ್ದರು ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಮಗುವಿನೊಂದಿಗೆ ಭೇಟಿ ನೀಡಿ, ವಿಶೇ ಷ, ಪೂಜೆ ಸಲ್ಲಿಸಿದ್ದಾರೆ.
2023ರ ಆಗಸ್ಟ್ 24ರಂದು ಕೊಡಗಿನಲ್ಲಿ ಹರ್ಷಿಕಾ ಮತ್ತು ಭುವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಅವರ ಮದುವೆಗೆ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.