ಕೊರೊನಾ ನಿಯಮಾಗಳು ‘ಸಿನಿಮಾ ತಾರೆಯರಿಗೆ’ ಅನ್ವಯಿಸಲ್ವಾ..?
ಬೆಂಗಳೂರು: ಬ್ರಿಟನ್ ನಲ್ಲಿ ಹೊಸ ಮಾದರಿಯ ಕೊರೊನಾ ವೈರಸ್ ಪತ್ತೆಯಾಗಿ ವೇಗವಾಗಿ ಹರಡುತ್ತಿದ್ದು, ಇದೀಗ ಭಾರತ ಸೇರಿದಂತೆ ಇತರೇ ರಾಷ್ಟ್ರಗಳಿಗೂ ಲಗ್ಗೆ ಇಟ್ಟಿದೆ. ಇತ್ತ ಬ್ರಿಟನ್ ನಿಂದ ಭಾರತಕ್ಕೆ ಬಂದಿರುವವರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಲೇ ಬೇಕು ಕ್ವಾರೆಂಟೈನ್ ನಲ್ಲಿ ಇರಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಇಲಾಖೆ ಮಾರ್ಗಸೂಚಿಯನ್ನೂ ಸಹ ರಿಲೀಸ್ ಮಾಡಿದೆ. ಆದ್ರೆ ಈ ರೂಲ್ಸ್ ಕೇವಲ ಸಾರ್ವಜನಿಕರಿಷ್ಟೇ ಸೆಲೆಬ್ರಿಟಿಗಳಿಗೆ ಇಲ್ವಾ ಅನ್ನೋ ಅನುಮಾನ ಮೂಡಿದೆ.
ಗ್ರಾ. ಪಂಚಾಯತಿ ಚುನಾವಣೆ : ಎಲ್ಲೆಲ್ಲಿ ಏನೆಲ್ಲಾ ಎಡವಟ್ಟುಗಳಾಯ್ತು ನೋಡಿ..!
ಯಾಕಂದ್ರೆ ಲಂಡನ್ ನಲ್ಲಿ ಭೋಜ್ ಪುರಿ ಚಿತ್ರದ ಶೂಟಿಂಗ್ ಗಾಗಿ ವಾಸ್ತವ್ಯ ಹೂಡಿದ್ದ ನಟಿ ಹರ್ಷಿಕಾ ಪೂಣಾಚ್ಚಾ ಇದೀಗ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ. ಆದ್ರೆ ಲಂಡನ್ ನಿಂದ ವಾಪಸ್ಸಾದ್ರೂ ಸಹ ಹರ್ಷಿಕಾ ಮಾತ್ರ ಕ್ವಾರಂಟೈನ್ ಆಗಿಲ್ಲ. ಅಷ್ಟೇ ಅಲ್ಲ ಕ್ವಾರಂಟೈನ್ ಗೂ ಒಳಗಾಗದೇ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು. ಇದು ಅನೇಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹರ್ಷಿಕಾ, ನನಗೆ ಕೊರೊನಾದ ಯಾವುದೇ ಗುಣಲಕ್ಷಣಗಳೂ ಕಂಡುಬಂದಿಲ್ಲ. ಲಂಡನ್ ನಿಂದ ಎರಡು ವಾರದ ಹಿಂದೆಯೇ ವಾಪಸ್ ಆಗಿದ್ದು, ಆರಾಮವಾಗಿದ್ದೇನೆ ಎಂದು ಹೇಳಿದ್ದಾರೆ. ಆದ್ರೆ ಬೇರೆಯವರಿಗೆ ಇರುವ ರೂಲ್ಸ್ ಸೆಲೆಬ್ರಿಟಿಗಳಿಗೆ ಯಾಕಿಲ್ಲ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel