ಚಂದನವನದ ಚಿಟ್ಟೆ ಎಂದೇ ಖ್ಯಾತಿಯಾಗಿದ್ದ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ (Bhuvan Ponnanna) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇಂದು ಕೊಡಗಿನಲ್ಲಿ (Kodava) ಅದ್ದೂರಿಯಾಗಿ ಈ ಜೋಡಿ ಮದುವೆಯಾಯಿತು. 12 ವರ್ಷಗಳ ಪ್ರೀತಿಗೆ ಈ ಜೋಡಿ ಇಂದಿಗೆ ಪ್ರೀತಿಯ ಮುದ್ರೆ ಒತ್ತಿದೆ. ಗುರುಹಿರಿಯರ ಸಮ್ಮುಖದಲ್ಲಿ ನಟಿ ಹರ್ಷಿಕಾ(Harshika Poonacha)- ಭುವನ್ ಕೊಡವ ಪದ್ಧತಿಯಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿರಾಟ್ಪೇಟೆಯಲ್ಲಿ ಅಮ್ಮತ್ತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಲುಕ್ನಲ್ಲಿ ನವಜೋಡಿ ಗಮನ ಸೆಳೆದಿದ್ದಾರೆ.
ಮದುವೆಯೂ ಮುನ್ನವೇ ಹರ್ಷಿಕಾ-ಭುವನ್ ಗೃಹಪ್ರವೇಶ ನೆರವೇರಿತ್ತು. ಆಗಸ್ಟ್ 23ರಂದು ಊರ್ಕುಡುವ ಶಾಸ್ತ್ರ ನಡೆದಿತ್ತು. ಸದ್ಯ ಮದುವೆಯಾಗಿರುವ ಜೋಡಿಗೆ ಅಭಿಮಾನಿಗಳು ಶುಭ ಕೋರಿದ್ದಾರೆ. ಹರ್ಷಿಕಾ ದಂಪತಿಯ ಮದುವೆಗೆ ಮಾಜಿ ಸಿಎಂ ಬಿಎಸ್ವೈ ಸೇರಿದಂತೆ ಹಲವರು ಆಗಮಿಸಿದ್ದರು.