Haryana – ಒಂದೇ ಕುಟಂಬದ 6 ಮಂದಿ ಶವವಾಗಿ ಪತ್ತೆ…
ಶುಕ್ರವಾರ ಹರಿಯಾಣ ರಾಜ್ಯದ ಅಂಬಾಲದ ಬಲಾನಾ ಗ್ರಾಮದಲ್ಲಿ ಒಂದೇ ಕುಟುಂಬದ ಆರು ಮಂದಿ ನಿಗೂಢ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತರನ್ನು ಸಂಗತ್ ರಾಮ್ (65), ಸುಖ್ವಿಂದರ್ ಸಿಂಗ್ (34), ಮಹೀಂದ್ರಾ ಕೌರ್ (ಸಂಗತ್ ರಾಮ್ ಅವರ ಪತ್ನಿ), ರೀನಾ (ಸುಖ್ವಿಂದರ್ ಸಿಂಗ್ ಅವರ ಪತ್ನಿ) ಎಂದು ಗುರುತಿಸಲಾಗಿದೆ. ಸುಖ್ವಿಂದರ್ ಸಿಂಗ್ ಅವರ ಇಬ್ಬರು ಪುತ್ರಿಯರ ಹೆಸರು ಆಶು (5) ಮತ್ತು ಜಸ್ಸಿ (7).
ವರದಿಗಳ ಪ್ರಕಾರ, ಸುಖವಿಂದರ್ ಮೊದಲು ತನ್ನ ಹೆತ್ತವರಿಗೆ ಮತ್ತು ನಂತರ ತನ್ನ ಹೆಂಡತಿ ಮತ್ತು ಮಕ್ಕಳಿಗೆ ವಿಷವನ್ನು ನೀಡಿದ್ದಾನೆ ಎಂದು ಶಂಕಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬಾಲಾ ನಗರದ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ವರದಿಗಳ ಪ್ರಕಾರ ಸುಖವಿಂದರ್ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಸಾವಿನ ಹಿಂದಿನ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
Haryana: 6 Members Of Family Found Dead Inside House Under Mysterious Circumstances In Ambala, Probe On