Haryana Bus Accident : ಬಸ್ ಗೆ ಡಿಕ್ಕಿ ಹೊಡೆದ ಟ್ರಕ್ – ಎಂಟು ಮಂದಿ ಸಾವು
ಟ್ರಕ್‌ವೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ಜಿಲ್ಲೆಯ ಕಕ್ಕರ್ ಮಜ್ರಾ ಗ್ರಾಮದ ಬಳಿ ಶುಕ್ರವಾರ ನಡೆದಿದೆ. ಪಂಚಕುಲ ಯಮುನಾನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಬಸ್ ಬರೇಲಿಯಿಂದ ಹಿಮಾಚಲ ಪ್ರದೇಶದ ಬದ್ದಿಗೆ ತೆರಳುತ್ತಿತ್ತು. ಕಕ್ಕರ್ ಮಜ್ರಾದಲ್ಲಿ ಬಸ್ ನ ಮೂವರು ಪ್ರಯಾಣಿಕರು ಇಳಿಯುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಗಾಯಾಳುಗಳನ್ನು ಅಂಬಾಲಾ ಸಿಟಿ ಮತ್ತು ನಾರೈಂಗರ್‌ನಲ್ಲಿರುವ ಸಿವಿಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿದ್ದ ಹೆಚ್ಚಿನವರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ವಲಸೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ಮತ್ತು ಗಾಯಾಳುಗಳನ್ನ ಸ್ಥಳಿಯರ ಸಹಾಯದಿಂದ ಬಸ್ ನಿಂದ ಹೊರತೆಗೆಯಲಾಗಿದೆ. ಶಹಜಾದ್‌ಪುರ ಠಾಣಾ ಪೊಲೀಸ್ ರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Haryana Bus Accident : A truck collided with a bus – eight people died