Haryana: ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಗೆ ಕಪಾಳಮೋಕ್ಷ
ಸೆಕ್ಯೂರಿಟಿ ಗಾರ್ಡ್, ಲಿಫ್ಟ್ ಆಪರೇಟರ್ ಗೆ ಕಪಾಳಮೋಕ್ಷ
ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ನಡೆದ ಘಟನೆ
ಪೊಲೀಸರಿಂದ ಆರೋಪಿ 39 ವರ್ಷದ ವರುಣ್ ನಾಥ್ ಬಂಧನ
ಕಪಾಳಮೋಕ್ಷದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಲಕ್ನೋ : ಲಿಫ್ಟ್ ನಿಂತಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ ಗೆ ಉದ್ಯಮಿಯೊಬ್ಬ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಸಿ ಕ್ಲೋಸ್ ನಾರ್ಥ್ ಸೋಸೈಟಿಯ ನಿವಾಸಿ ವರುಣ್ ನಾಥ್ ಎಂಬುವವರು ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ಅವರನ್ನ ಬಂಧಿಸಲಾಗಿದೆ. ವರುಣ್ ನಾಥ್ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ.
ಇದರೊಂದಿಗೆ ಕೋಪಗೊಂಡ ವರುಣ್ ತನ್ನ ಸೊಸೈಟಿಯ ಸೆಕ್ಯೂರಿಟಿ ಗಾರ್ಡ್ ಬಳಿ ಅನುಚಿತವಾಗಿ ವರ್ತಿಸಿದ್ದಾನೆ.
ಥಳಿತದ ದೃಶ್ಯಾವಳಿಗಳು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವರುಣ್ ಕೆಟ್ಟ ಭಾಷೆಯಲ್ಲಿ ಬೈಯತ್ತಾ ಸೆಕ್ಯೂರಿಟಿ ಗಾರ್ಡ್ ಗೆ ಕಪಾಳಮೋಕ್ಷ ಮಾಡಿದ್ದಾನೆ.
ಈ ಹಿನ್ನೆಲೆಯಲ್ಲಿ ಭದ್ರತಾ ಸಿಬ್ಬಂದಿ ಜಮಾಯಿಸಿ ಸೊಸೈಟಿಯ ಗೇಟ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








