ಹೇಟ್-ಇನ್-ಇಂಡಿಯಾ – ಮೇಕ್-ಇನ್-ಇಂಡಿಯಾ ಜೊತೆಗೆ ಸಹಬಾಳ್ವೆ ಸಾಧ್ಯವಿಲ್ಲ: ರಾಹುಲ್ ಗಾಂಧಿ
ಭಾರತದಿಂದ ಕೆಲವು ಜಾಗತಿಕ ಬ್ರಾಂಡ್ ಕಂಪನಿಗಳು ನಿರ್ಗಮಿಸುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ವಾಗ್ದಾಳಿ ನಡೆಸಿದರು. “ಹೇಟ್-ಇನ್-ಇಂಡಿಯಾ” ಮತ್ತು ಮೇಕ್-ಇನ್-ಇಂಡಿಯಾ ಜೊತೆಗೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ನಿರುದ್ಯೋಗದ ಬಗ್ಗೆ ಮಾತನಾಡಿದ ರಾಹುಲ್ “ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ” ಬಗ್ಗೆ ಗಮನಹರಿಸುವಂತೆ ಪ್ರಧಾನಿಯನ್ನು ಒತ್ತಾಯಿಸಿದರು. “ಭಾರತದಿಂದ ಬಿಸಿನೆಸ್ ಓಡಿಸುವ ಸುಲಭ. 7 ಜಾಗತಿಕ ಬ್ರಾಂಡ್‌ಗಳು. 9 ಕಾರ್ಖಾನೆಗಳು. 649 ಡೀಲರ್‌ಶಿಪ್‌ಗಳು. 84,000 ಉದ್ಯೋಗಗಳು” ಎಂದು ಟ್ವಿಟರ್ ಪೋಸ್ಟ್ ಮಾಡಿದ್ದಾರೆ.
https://twitter.com/RahulGandhi/status/1519175885538004992?ref_src=twsrc%5Etfw%7Ctwcamp%5Etweetembed%7Ctwterm%5E1519175885538004992%7Ctwgr%5E%7Ctwcon%5Es1_&ref_url=https%3A%2F%2Fwww.newindianexpress.com%2Fnation%2F2022%2Fapr%2F27%2Fhate-in-india-make-in-india-cant-coexist-rahul-to-pm-modi-2447088.html
2017 ರಲ್ಲಿ ಷೆವರ್ಲೆ, 2018 ರಲ್ಲಿ ಮ್ಯಾನ್ ಟ್ರಕ್ಸ್, 2019 ರಲ್ಲಿ ಫಿಯೆಟ್ ಮತ್ತು ಯುನೈಟೆಡ್ ಮೋಟಾರ್ಸ್, 2020 ರಲ್ಲಿ ಹಾರ್ಲೆ ಡೇವಿಡ್ಸನ್, 2021 ರಲ್ಲಿ ಫೋರ್ಡ್ ಮತ್ತು 2022 ರಲ್ಲಿ ಡಾಟ್ಸನ್ ದೇಶದಿಂದ ನಿರ್ಗಮಿಸಿದ ಏಳು ಜಾಗತಿಕ ಬ್ರ್ಯಾಂಡ್ ಕಂಪನಿಗಳನ್ನ ತೋರಿಸುವ ಚಿತ್ರವನ್ನು ಗಾಂಧಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
“ಮೋದಿ ಜಿ, ಹೇಟ್-ಇನ್-ಇಂಡಿಯಾ ಮತ್ತು ಮೇಕ್-ಇನ್-ಇಂಡಿಯಾ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ! ಬದಲಿಗೆ ಭಾರತದ ವಿನಾಶಕಾರಿ ನಿರುದ್ಯೋಗ ಬಿಕ್ಕಟ್ಟಿನ ಮೇಲೆ ಕೇಂದ್ರೀಕರಿಸುವ ಸಮಯ” ಎಂದು ರಾಹುಲ್ ಹೇಳಿದರು. ನಿರುದ್ಯೋಗ ಸಮಸ್ಯೆಗೆ ಸಂಬಂಧಿಸಿದಂತೆ ರಾಹುಲ್ ಮತ್ತು ಕಾಂಗ್ರೆಸ್, ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿವೆ.