ಲಕ್ನೋ : ದೇಶದಲ್ಲಿ ತೀವ್ರ ಸಂಚಲನ ಮೂಡಿಸಿರುವ ಹತ್ರಾಸ್ (Hathras gangrape) ಪ್ರಕರಣ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ.
ಈ ಮಧ್ಯೆ (Hathras gangrape) ಗ್ಯಾಂಗ್ ರೇಪ್ ಪ್ರಕರಣದ ಆರೋಪಿಗಳನ್ನು ಇರಿಸಲಾಗಿರುವ ಜೈಲಿಗೆ ಸ್ಥಳೀಯ ಬಿಜೆಪಿ ಸಂಸದ ರಾಜವೀರ್ ಸಿಂಗ್ ದಿಲೇರ್ ಅವರು ಭೇಟಿ ನೀಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಂಸದ ರಾಜವೀರ್ ಸಿಂಗ್ ದಿಲೇರ್ ಅವರು ಹತ್ರಾಸ್ ಆರೋಪಿಗಳನ್ನು ಭೇಟಿಯಾಗಲು ಜೈಲಿಗೆ ಹೋಗಿದ್ದರು.
ಆದ್ರೆ ಅಧಿಕಾರಿಗಳು ಸಂಸದರಿಗೆ ಆರೋಪಿಗಳ ಭೇಟಿಗೆ ಅವಕಾಶ ನೀಡಿಲ್ಲ. ಹಾಗಾಗಿ ಸಂಸದರು ಅವರನ್ನು ಭೇಟಿಯಾಗದೇ ವಾಪಸ್ ಆಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇನ್ನು ಸಂಸದರು ಜೈಲಿನಿಂದ ಹೊರಬರುತ್ತಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ರಾಜ್ಯಗಳಿಗೆ 20,000 ಕೋಟಿ ರೂ ಜಿಎಸ್ಟಿ ಪರಿಹಾರ ವಿತರಣೆ
ಜೈಲು ಭೇಟಿಯ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದಂತೆ ಈ ವಿಚಾರವಾಗಿ ಮಾತನಾಡಿರುವ ರಾಜವೀರ್ ಸಿಂಗ್, ನಾನು ಯಾವುದೇ ಖೈದಿಗಳನ್ನು ಭೇಟಿಯಾಗಲು ಜೈಲಿಗೆ ಹೋಗಿರಲಿಲ್ಲ.
ಕ್ಷೇತ್ರದ ಕೆಲಸದ ನಿಮಿತ್ ಎಸ್ ಎಸ್ ಪಿ ಅವರನ್ನು ಭೇಟಿಯಾಗಲು ತೆರಳಿದ್ದೆ ಎಂದಿದ್ದಾರೆ.
ಹತ್ರಾಸ್ನ 19 ವರ್ಷದ ದಲಿತ ಮಹಿಳೆ ಮೇಲೆ 4 ಮಂದಿ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಈಕೆಯನ್ನು ಸೆ.28 ರಂದು ದೆಹಲಿಯ ಸಫರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮರು ದಿವಸ ಮಹಿಳೆ ಮೃತಪಟ್ಟಿದ್ದಳು.
ಸೆಪ್ಟೆಂಬರ್ 30 ರಂದು ಬೆಳಗ್ಗೆ ಮೂರು ಗಂಟೆಗೆ ಸಂತ್ರಸ್ತೆಯ ಅಂತ್ಯಸಂಸ್ಕಾರವನ್ನು ಪೊಲೀಸರು ನಡೆಸಿದ್ದರು.
ಈ ವೇಳೆ ಆಕೆಯ ಪೋಷಕರು ನಮ್ಮ ಅನುಮತಿ ಇಲ್ಲದೇ ಪೊಲೀಸರು ಅಂತ್ಯಸಂಸ್ಕಾರ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದರು.










