ಬೆಂಗಳೂರು: ನಶೆರಾಣಿ ಸಂಜನಾ ಗಲ್ರಾನಿ ನೌಟಂಕಿ ಆಟಗಳಿಗೆ ಕೊನೆಯೇ ಇಲ್ವಾ ಎಂಬ ಮಾತುಗಳು ಸ್ಯಾಂಡಲ್‍ವುಡ್ ಅಂಗಳಲ್ಲಿ ಕೇಳಿ ಬರುತ್ತಿವೆ. ಇದರ ಬೆನ್ನಲ್ಲೇ ಸಂಜನಾ ಗಲ್ರಾನಿ ಹವಾಲಾ ಲಿಂಕ್ ಇದೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಹವಾಲ ದಂಧೆಯಲ್ಲಿ ನಟಿ ಸಂಜನಾ ಗಲ್ರಾನಿ ಹಣ ತೊಡಗಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಟಿ ಸಂಜನಾಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ತನಿಖೆ ವೇಳೆ ಇಡಿ ಅಧಿಕಾರಿಗಳು ಹವಾಲಾ ದಂಧೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದಂತೆ ಸಂಜನಾ ಗಲ್ರಾನಿ ಕಕ್ಕಾಬಿಕ್ಕಿಯಾಗಿದಳು ಎಂದು ಮೂಲಗಳು ತಿಳಿಸಿವೆ.
ಸಂಜನಾಳ ವಾಟ್ಸ್‍ಆಪ್ ಮೆಸೇಜ್, ಚಾಟ್‍ಗಳ ಪರಿಶೀಲನೆ ವೇಳೆ ಸಿಸಿಬಿ ಪೊಲೀಸರಿಗೆ ಈ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನು ಸಿಸಿಬಿ ಪೊಲೀಸರು ಇ.ಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಪ್ರಕರಣ ದಾಖಲಿಕೊಂಡು ತನಿಖೆ ಆರಂಭಿಸಿದ ಇ.ಡಿ ಅಧಿಕಾರಿಗಳಿಗೆ ಸಂಜನಾಳ ಹವಾಲಾ ಲಿಂಕ್ ಪತ್ತೆಯಾಗಿದೆ ಎನ್ನಲಾಗಿದೆ.
ಡ್ರಗ್ಸ್ ಡೀಲ್ ದಂಧೆ ನಡೆಸುತ್ತಿದ್ದ ಸಂಜನಾ, ಅದರಿಂದ ಬಂದ ಹಣವನ್ನು ಹವಾಲಾ ದಂಧೆಗೆ ಬಳಸಿಕೊಳ್ಳುತ್ತಿದ್ದಳಂತೆ. 36 ಲಕ್ಷದಿಂದ 50 ಲಕ್ಷವರೆಗೆ ಬಿಟ್ ಕಾಯಿನ್ ದಂಧೆಯಲ್ಲಿ ಸಂಜನಾ ಹಣ ತೊಡಿಸಿಕೊಂಡಿದ್ದಳು. ಆಪ್ತ ಜೋಯೆಬ್ ಮೂಲಕ ಸಮಜನಾ ಬಿಟ್ ಕಾಯಿನ್ ವ್ಯವಹಾರ ಮಾಡುತ್ತಿದ್ದಳು ಎಂದು ಸಿಸಿಬಿ ಹಾಗೂ ಇ.ಡಿ ಮೂಲಗಳು ತಿಳಿಸಿವೆ.
ಸಂಜನಾ 10 ಲಕ್ಷದಿಂದ 1 ಕೋಟಿವರೆಗೂ ಬಿಟ್ ಕಾಯಿನ್ ದಂಧೆ ನಡೆಸುತ್ತಿದ್ದಳು. ಇದಕ್ಕೆ ಹವಾಲಾ ಜಾಲವನ್ನು ಬಳಕೆ ಮಾಡುತ್ತಿದ್ದಳು. ಜೊತೆಗೆ ಕ್ಯಾಸಿನೋಗಳಲ್ಲಿ ಬ್ಲಾಕ್ ಅಂಡ್ ವೈಟ್ ಮನಿ ದಂಧೆಯನ್ನು ಸಂಜನಾ ಮಾಡುತ್ತಿದ್ದಳು ಎನ್ನಲಾಗಿದೆ.

ನಿನ್ನೆ ಸಿಸಿಬಿ ಪೊಲೀಸರು ಸಂಜನಾ ಗಲ್ರಾನಿ ಆಪ್ತ ಜೋಯೆಬ್‍ನನ್ನು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಪೆಡ್ಲರ್ ಅಗಿ ಕೆಲಸ ಮಾಡುತ್ತಿದ್ದ ಜೋಯೆಬ್ ಜತೆ ಆತನ ಆಪ್ತ ಅನಿಲ್‍ನನ್ನೂ ಕೂಡ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರು ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಸಂಜನಾ ಡ್ರಗ್ಸ್, ಬಿಟ್ ಕಾಯಿನ್ ಹಾಗೂ ಹವಾಲಾ ದಂಧೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಹೀಗಾಗಿ ಸಂಜನಾ ನಡೆಸುತ್ತಿದ್ದ ಡ್ರಗ್ಸ್ ಪಾರ್ಟಿಗಳಿಗೆ ಯಾರು-ಯಾರು ಬರುತ್ತಿದ್ದರು
, ಪೇಜ್-3 ಪಾರ್ಟಿಗಳಲ್ಲಿ ಯಾರು ಇರುತ್ತಿದ್ದರು ಇತ್ಯಾದಿ ವಿವರಗಳ ಬಗ್ಗೆ ಜೋಯೆಬ್‍ನಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.






