ಭಾರತದಲ್ಲಿ ಡಿಜಿಟಲೀಕರಣ ಪ್ರಕ್ರಿಯೆಯು ವೇಗದಿಂದ ಸಾಗುತ್ತಿದ್ದು, ಸೈಬರ್ ವಂಚಕರ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ. ಅಂತರ್ಜಾಲ ಅಥವಾ ಫೋನ್ ಬಳಕೆದಾರರು ಆದಷ್ಟು ಎಚ್ಚರಿಕೆಯಿಂದ ಇರುವುದು ಉತ್ತಮ.
ಮೋಸದ ಕರೆಯ ಲಕ್ಷಣಗಳು
– ಕ್ಲೈಮ್: ‘ನಿಮ್ಮ ಕ್ರೆಡಿಟ್ ಕಾರ್ಡ್ ಮೋಸದ ಚಟುವಟಿಕೆಯಲ್ಲಿ ತೊಡಗಿದೆ. ಮುಂದಿನ ಎರಡು ಗಂಟೆಗಳಲ್ಲಿ ನಿಮ್ಮ ಹೆಸರಿನಲ್ಲಿರುವ ಎಲ್ಲಾ ಬ್ಯಾಂಕ್ ಖಾತೆಗಳನ್ನು ನಿರ್ಬಂಧಿಸಲಾಗುತ್ತದೆ.
– ಸಂದೇಶ: ಹೆಚ್ಚಿನ ಮಾಹಿತಿಗಾಗಿ 9 ಸಂಖ್ಯೆಯನ್ನು ಒತ್ತುವಂತೆ ಗ್ರಾಹಕರಿಗೆ ತಿಳಿಸಲಾಗುತ್ತದೆ.
ನೀವು ಏನು ಮಾಡಬೇಕು?
1. ಕರೆ ನಿರ್ಲಕ್ಷಿಸಿ: ಅಂಥ ಕರೆಗಳನ್ನು ಸ್ವೀಕರಿಸಿದರೆ ಕೂಡಲೇ ನಿರ್ಲಕ್ಷಿಸಿ.
2. ಸಂಖ್ಯೆ ಒತ್ತಬೇಡಿ: ಕರೆ ಸ್ವೀಕರಿಸಿದರೂ ಯಾವುದೇ ಸಂಖ್ಯೆಯನ್ನು ಒತ್ತಬೇಡಿ.
3. ಅಧಿಕೃತ ಸಂಪರ್ಕ: ಕರೆಯ ಬಗ್ಗೆ ಸಂದೇಹವಿದ್ದರೆ ಅಧಿಕೃತ ಸಹಾಯವಾಣಿ ಮೂಲಕ ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಿ.
4. ದೂರು ನೀಡಿ: ಸೈಬರ್ ಕ್ರೈಮ್ ಪೋರ್ಟಲ್ ಅಥವಾ ಸ್ಥಳೀಯ ಅಧಿಕಾರಿಗಳಿಗೆ ದೂರು ನೀಡಿ.
ಸ್ಕ್ಯಾಮ್ ಗಳಿಂದ ಸುರಕ್ಷಿತವಾಗಿರಿ
– ಆರ್‌ಬಿಐ ಅಥವಾ ಬ್ಯಾಂಕ್: ನಿಜವಾದ ಸಂಸ್ಥೆಗಳು ನಿಮ್ಮ ಖಾತೆಯನ್ನು ನಿರ್ಬಂಧಿಸಲು ಅಥವಾ ಫೋನ್‌ನಲ್ಲಿ ಸೂಕ್ಷ್ಮ ಮಾಹಿತಿಯನ್ನು ಕೇಳಲು ಬೆದರಿಕೆ ಹಾಕುವುದಿಲ್ಲ.
– RBI ಹೆಸರಲ್ಲಿ ವಂಚನೆ: RBI ಹೆಸರಲ್ಲಿ ಕರೆ ಬಂದರೂ ಕರೆಯನ್ನು ಕಟ್ ಮಾಡಿ.
ನಕಲಿ ಕರೆಗಳಿಂದ ರಕ್ಷಿಸಿಕೊಳ್ಳಲು ಸಲಹೆಗಳು
1. ಅನಿರೀಕ್ಷಿತ ಕರೆಗಳ ಬಗ್ಗೆ ಎಚ್ಚರಿಕೆ: ಅಪರಿಚಿತ ಸಂಖ್ಯೆಗಳು ಅಥವಾ ಅನಿರೀಕ್ಷಿತ ಮೂಲಗಳಿಂದ ಬರುವ ಕರೆಗಳ ಬಗ್ಗೆ ಜಾಗರೂಕರಾಗಿರಿ.
2. ಗುರುತನ್ನು ಪರಿಶೀಲಿಸಿ: ಕರೆ ಮಾಡುವವರ ಗುರುತನ್ನು ಸ್ವತಂತ್ರವಾಗಿ ಪರಿಶೀಲಿಸಿ.
3. ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ಸೂಕ್ಷ್ಮ ವಿವರಗಳನ್ನು ಅಪರಿಚಿತರಿಗೆ ಬಹಿರಂಗಪಡಿಸಬೇಡಿ.
4. ತುರ್ತು ತಂತ್ರಗಳಿಂದ ಒತ್ತಡಕ್ಕೆ ಒಳಗಾಗಬೇಡಿ: ಶಾಂತ ಹಾಗೂ ವಿವೇಚನೆಯಿಂದ ಕ್ರಮ ತೆಗೆದುಕೊಳ್ಳಿ.