86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ…
ಇಂದಿನಿಂದ ಮೂರು ದಿನಗಳ ಕಾಲ ಏಲಕ್ಕಿ ನಗರಿ ಹಾವೇರಿಯಲ್ಲಿ ನಡೆಯಲಿರುವ 86 ನೇ ಅಖಿತ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಲಾಗಿದೆ. ನಗರದ ಅಜ್ಜಯ್ಯನ ದೇವಸ್ಥಾನದ ಎದುರು ಕನಕ – ಶರೀಫ ಮತ್ತು ಸರ್ವಜ್ಞ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯುತ್ತಿದೆ
ರಾಷ್ಟ್ರ, ನಾಡ ಮತ್ತು ಸಾಹಿತ್ಯ ಪರಿಷತ್ತಿನ ಧ್ವಜಾರೋಹಣವನ್ನ ಏಕಕಾಲಕ್ಕೆ ಧ್ವಜಾರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇ ಳನ ಚಾಲನೆ ನೀಡಲಾಯಿತು.
ರಾಷ್ಟ್ರ ಧ್ವಜದ ಧ್ವಜಾರೋಹಣವನ್ನ ಹಾವೇರಿ ಉಸ್ತುವರಿ ಸಚಿವ ಶಿವರಾಂ ಹೆಬ್ಬಾರ್ ಅವರು ಪೂರೈಸಿದರೇ, ಸಾಹಿತ್ಯ ಪರಿಷತ್ತಿನ ಧವಜಾರೋಹಣವನ್ನ ಕಸಾಪ ಅಧ್ಯಕ್ಷ ಮಹೇಶ್ ಜ್ಯೋಷಿ ಮಾಡಿದರು. ಕನ್ನಡ ಧ್ವಜಾರೋಹಣವನ್ನ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಅವರು ಮಾಡಿದರು.
ಮೂರು ಧ್ವಜಗಳನ್ನು ಎಕಕಾಲಕ್ಕೆ ಆರೋಹಣ ಮಾಡುವ ಮೂಲಕ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಮಾಡಲಾಯಿತು.
ಬೆಳಿಗ್ಗೆ 7-30 ರಿಂದ 10-30ರವರೆಗೆ ಸಮ್ಮೇಳನಾಧ್ಯಕ್ಷರಾದ ಸಾಹಿತಿ ದೊಡ್ಡರಂಗೆಗೌಡರನ್ನ ಮೆರವಣಿಗೆ ಮಾಡಲಾಯಿತು. ನಗರದ ಐತಿಹಾಸಿಕ ಪುಸಿದ್ದೇಶ್ವರ ದೇವಸ್ಥಾನದಿಂದ ಬಸ್ ನಿಲ್ದಾಣ, ಆರ್ಟಿಓ ಕಚೇರಿ ಮಾರ್ಗವಾಗಿ ಸಮ್ಮೇಳ ವೇದಿಕೆವರೆಗೆ ಮೆರವಣಿಗೆ ಕರೆತರಲಾಯಿತು. 101 ಕಲಾ ತಂಡಗಳಿಂದ 1200 ಕಲಾವಿದರು ಮೆರವಣಿಗೆಯಲ್ಲಿ ಭಾಗಿ.
Haveri: 86th akhila bharata kannada sahitya smmelana