ಮಾಜಿ ಶಿಕ್ಷಣ ಸಚಿವ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ ನಿಧನ…
ಮಾಜಿ ಶಿಕ್ಷಣ ಹಾಗೂ ಸಕ್ಕರೆ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ದುಂಡಶಿ ತಾಂಡಾ ಗ್ರಾಮದ ಡಾ. ಹೆಗ್ಗಪ್ಪ ದೇಶಪ್ಪ ಲಮಾಣಿ ಡಾ.ಎಚ್.ಡಿ. ಮಾಣಿ (84) ವಿಧಿವಶರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದ ಸೋಮವಾರ ನಿಧನ ಹೊಂದಿದ್ದಾರೆ. ಡಾ.ಎಚ್.ಡಿ ಲಮಾಣಿ ಅವರು ಬಿಜಾಪೂರ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ಧಾರವಾಡದ ಕೆಸಿಡಿ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಹಿಂದಿ ವಿಭಾಗದ ಮಖ್ಯಸ್ಥರಾಗಿ ಸೇವೆ ಸಲ್ಲಸುತ್ತಿದ್ದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಮೀಸಲು ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಯಾಗಿ ಎಸ್. ಬಂಗಾರೆಪ್ಪ ಆಡಳಿತದಲ್ಲಿ ಮುಖ್ಯ ಸಚೇತರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಅವರು ಹಾವೇರಿ ಜಿಲ್ಲೆಯ ಮೋಟೆಬೆನ್ನೂರ ಜಿ.ಪಂ ಮತಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾದರು.
ವೀರಪ್ಪ ಮೊಯ್ಲಿ ಮುಖ್ಯ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬ್ಯಾಡಗಿ ಮೀಸಲು ಮತಕ್ಷೇತ್ರದಿಂದ ಶಾಸಕರಾಗಿ ಮರು ಆಯ್ಕೆಗೊಂಡು ಶಿಕ್ಷಣ ಖಾತೆ ಸಕ್ಕರೆ ಖಾತೆ ಸಚಿವರಾಗಿದ್ದರು. ಇವರ ಅಂತ್ಯ ಸಂಸ್ಕಾರವನ್ನು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಧುಂಡಶಿ ತಾಂಡಾ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸುವುದಾಗಿ ಕುಟುಂಬಸ್ಥರು ತಿಳಿಸಿದರು. ಮೃತರು ಪತ್ನಿ ನಾಲ್ಕು ಜನ ಪುತ್ರರು ಅಪಾರ ಬಂದು ಬಳಗದಿಂದ ಅಗಲಿದ್ದಾರೆ.
Haveri: Former Education Minister Dr. Heggappa Deshappa Lamani passes away