Haveri | ಮನೆ ಗೋಡೆ ಕುಸಿದು ವೃದ್ಧ ಸಾವು
ಹಾವೇರಿ : ಮನೆ ಗೋಡೆ ಕುಸಿದು ವೃದ್ಧ ಮೃತಪಟ್ಟಿರುವ ಘಟನೆ ಹಿರೇಕೆರೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಡೆದಿದೆ.
68 ವರ್ಷದ ಹನುಮಂತಪ್ಪ ಹರಿಜನ ಮೃತ ವ್ಯಕ್ತಿಯಾಗಿದ್ದಾರೆ.
ಹನುಮಂತಪ್ಪ ಅವರ ಮನೆ ಗೋಡೆ ಮಳೆಗೆ ನೆನೆದಿದ್ದು, ನಿನ್ನೆ ರಾತ್ರಿ ಮನೆ ಕುಸಿದು ಬಿದ್ದಿದೆ.

ಈ ವೇಳೆ ಹನುಮಂತಪ್ಪ ಅವರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನು ಗೋಡೆ ಕುಸಿದಿದ್ದಾಗ ಮನೆಯಲ್ಲಿ ನಾಲ್ಕೈದು ಜನರಿದ್ದು, ಅವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಸಂಬಂಧ ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.