ಕೋಲ್ಕತ್ತಾ: ಕೆಲ ದಿನಗಳ ಹಿಂದೆ ” ನನಗೇನಾದರೂ ಕೊರೊನಾ ವೈರಸ್ ಸೋಂಕು ದೃಢಪಟ್ಟರೇ ಮಮತಾ ಬ್ಯಾನರ್ಜಿಯವರನ್ನು ಅಪ್ಪಿಕೊಳ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ಅನುಪಮ್ ಹಜ್ರಾಗೆ ಕೊರೊನಾ ಕಾಣಿಸಿಕೊಂಡಿದೆ.
ಸದ್ಯ ಅನುಪಮ್ ಹಜ್ರಾ ಅವರನ್ನು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಜ್ರಾ ಅವರು ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು. ಅವರ ಕೋವಿಡ್ ವರದಿ ಪಾಸಿಟಿವ್ ಬಂದಿದೆ.
ಇದನ್ನೂ ಓದಿ : ನಾನು ಅನ್ಯಾಯ ಮಾಡುವವರ ಎದುರು ಎಂದಿಗೂ ತಲೆಬಾಗೋದಿಲ್ಲ : ರಾಹುಲ್ ಗಾಂಧಿ
ಕೋವಿಡ್-19 ರೋಗಿಗಳ ಕುಟುಂಬಗಳ ನೋವು ಏನು ಅಂತ ಮಮತಾ ಬ್ಯಾನರ್ಜಿಗೆ ಅರ್ಥ ಮಾಡಿಸಲು ನಾನು ಅವರನ್ನು ತಬ್ಬಿಕೊಳ್ಳುತ್ತೇನೆ ಎಂದು ಹಜ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಹಜ್ರಾ ನೀಡಿರುವ ಹೇಳಿಕೆ ವಿರುದ್ಧ ಸಿಲಿಗುರಿಯಲ್ಲಿ ಟಿಎಂಸಿ ದೂರು ದಾಖಲಿಸಿದೆ.








