ನವದೆಹಲಿ : ನಾನು ಅನ್ಯಾಯ ಮಾಡುವವರ ಎದುರು ಎಂದಿಗೂ ತಲೆಬಾಗೋದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಹತ್ರಾಸ್ ಪ್ರತಿಭಟನೆ ಘಟನೆ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಈ ಪ್ರಪಂಚದಲ್ಲಿ ನಾನು ಯಾರಿಗೂ ಹೆದರುವುದಿಲ್ಲ.
ಅನ್ಯಾಯದ ವಿರುದ್ಧ ಯಾರೊಬ್ಬರ ಮುಂದೆಯೂ ತಲೆಬಾಗುವುದಿಲ್ಲ. ಅಸತ್ಯವನ್ನು ಸತ್ಯದಿಂದ ಗೆಲ್ಲುತ್ತನೆ. ಅಸತ್ಯ ವಿರೋಧಿಸುವಾಗ ಎಲ್ಲಾ ನೋವುಗಳನ್ನು ನಾನು ಸಹಿಸಿಕೊಳ್ಳಬಲ್ಲೆ ಎಂದು ಬರೆದುಕೊಂಡಿದ್ದಾರೆ.
‘मैं दुनिया में किसी से नहीं डरूंगा… मैं किसी के अन्याय के समक्ष झुकूं नहीं, मैं असत्य को सत्य से जीतूं और असत्य का विरोध करते हुए मैं सभी कष्टों को सह सकूं।’
गाँधी जयंती की शुभकामनाएँ।#GandhiJayanti
— Rahul Gandhi (@RahulGandhi) October 2, 2020
ನಿನ್ನೆ ರಾಹುಲ್ ಗಾಂಧಿ , ಪ್ರಿಯಾಂಕಾ ಗಾಂಧಿ ಉತ್ತರಪ್ರದೇಶದ ಹತ್ರಾಸ್ ನಲ್ಲಿ ಅತ್ಯಾಚಾರಿಗಳಿಗೆ ಬಲಿಯಾದ 19 ವರ್ಷದ ದಲಿತ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಲು ಉತ್ತರಪ್ರದೇಶಕ್ಕೆ ಹೊರಟಿದ್ದರು.
ಈ ವೇಳೆ ಗ್ರೇಟರ್ ನೋಯ್ಡಾದ ಯಮುನಾ ಎಕ್ಸ್’ಪ್ರೆಸ್ ವೇ ಬಳಿ ರಾಹುಲ್, ಪ್ರಿಯಾಂಕ್ ಅವರ ವಾಹನಗಳನ್ನು ಪೊಲೀಸರು ತಡೆದಿದ್ದರು.
ಇದನ್ನೂ ಓದಿ : ಮಹಾತ್ಮ ಗಾಂಧಿ ಜಯಂತಿ : ರಾಷ್ಟ್ರಪತಿ ಕೋವಿಂದ್ ನಮನ
ಈ ವೇಳೆ ಪಕ್ಷದ ಕಾರ್ಯಕರ್ತರ ಜೊತೆಗೂಡಿದ ರಾಹುಲ್ ಮತ್ತು ಪ್ರಿಯಾಂಕಾ ನಡೆದುಕೊಂಡೇ ಹೆದ್ದಾರಿಯಲ್ಲಿ ಹೊರಟ ವೇಳೆ ಅವರನ್ನು ಪೊಲೀಸರು ವಶಕ್ಕೆ ಪಡೆದು, ಜೀಪಿನಲ್ಲಿ ಕರೆದೊಯ್ದು ಗೆಸ್ಟ್ ಹೌಸ್ ವೊಂದರಲ್ಲಿ ಇಟ್ಟಿದ್ದರು.
ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದ್ದರು.
ಯುಪಿ ಪೊಲೀಸರ ನಡೆ ವಿರುದ್ಧ ದೇಶದಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಯೋಗಿ ವಿರುದ್ಧ ಕಿಡಿಕಾರುತ್ತಿದ್ದಾರೆ.







