ಅರಸರ ಗದ್ದುಗೆ ಸಂರಕ್ಷಣೆಗೆ ಹೈಕೋರ್ಟ್ ಆದೇಶ

1 min read
HC

ಅರಸರ ಗದ್ದುಗೆ ಸಂರಕ್ಷಣೆಗೆ ಹೈಕೋರ್ಟ್ ಆದೇಶ

ಕೊಡಗು : ಮಡಿಕೇರಿಯಲ್ಲಿರುವ ಕೊಡಗಿನ ಅರಸರ ಗದ್ದುಗೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದು, ಈ ಪ್ರದೇಶಕ್ಕೆ ಒಳಪಡುವ 19 ಏಕರೆ 86 ಸೆಂಟ್ ಜಾಗದಲ್ಲಿ ಸಾಕಷ್ಟು ಅತಿಕ್ರಮ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಅರಸರ ಗದ್ದುಗೆಸಂರಕ್ಷಿಸುವಂತೆ ರಾಜ್ಯ ಉಚ್ಚನ್ಯಾಯಾಲಯದ ವಿಭಾಗ ಪೀಠ ಆದೇಶ ನೀಡಿದೆ.

ಮಡಿಕೇರಿ ಹೃದಯ ಭಾಗದಲ್ಲಿರುವ ಕೋಟೆ ಸಂರಕ್ಷಣೆ ಬಗ್ಗೆ ಈ ಹಿಂದೆ ನ್ಯಾಯಾಲಯದ ಮೆಟ್ಟಿಲ್ಲೇರಿದ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್ ವಿರೂಪಾಕ್ಷಪ್ಪ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಮೇರೆಗೆ ವಿಭಾಗ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಈ ಆದೇಶ ನೀಡಿದ್ದಾರೆ.

HC

ಹನ್ನೆರಡು ವರ್ಷಗಳ ಹಿಂದೆ ಮಡಿಕೇರಿ ತಹಶೀಲ್ದಾರ್ ರವರಿಗೆ ಅತಿಕ್ರಮಣ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ,1981ರಲ್ಲಿ ಸರ್ಕಾರದ ಅದೀನದಲ್ಲಿರುವ ಈ ಐತಿಹಾಸಿಕ ಪ್ರದೇಶವನ್ನು ಸರ್ವೆ ಕಾರ್ಯ ನಡೆಸಿ,ಅತಿಕ್ರಮಣ ಮಾಡಿದ ಸ್ಥಳದಲ್ಲಿ ವಾಸವಿರುವವರನ್ನು ತೆರವುಗೊಳಿಸಿ ಸಂರಕ್ಷಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ.ರಿಟ್ ಅರ್ಜಿ ವಿಚಾರಣೆ ಮೇ 28ಕ್ಕೆ ಮುಂದೂಡಲಾಗಿದೆ.

chinthamani

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd