ಅರೆ ಕಾಸಿನ ಮಜ್ಜಿಗೆಗೆ ಕೊಟ್ಟ ಪರಿಹಾರ : ಸಿಎಂ ಪ್ಯಾಕೇಜ್ ಬಗ್ಗೆ ಹೆಚ್ ಡಿಕೆ ಕಿಡಿ
ಬೆಂಗಳೂರು : ಕೊರೊನಾ ಲಾಕ್ ಡೌನ್ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ 1,250 ಕೋಟಿ ವಿಶೇಷ ಪ್ಯಾಕೇಜ್ ಅನ್ನು ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇದು ಅರೆ ಕಾಸಿನ ಮಜ್ಜಿಗೆಗೆ ಕೊಟ್ಟ ಪರಿಹಾರದಂತೆ ಇದೆ ಎಂದು ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನವಿಲ್ಲ.
ಇದು ಅತ್ಯಂತ ನಿರಾಶಾದಾಯಕ ಪ್ಯಾಕೇಜ್. ಹೂವಿನ ಬೆಳೆಗಾರರಿಗೆ ಘೋಷಣೆ ಮಾಡಿರೋ ಪ್ಯಾಕೇಜ್ ಕಳೆದ ವರ್ಷಕ್ಕಿಂತ ಕಡಿಮೆ. ಇದು ಯಾವುದಕ್ಕೂ ಸಾಲುವುದಿಲ್ಲ.
ಕೂಲಿ, ಬೀಜದ ಬೆಲೆ ಏರಿಕೆ ಆಗಿರೋವಾಗ ಈ ಸಹಾಯ ಏನೂ ಸಾಲೋದಿಲ್ಲ. ಇದು ಅರೆ ಕಾಸಿನ ಮಜ್ಜಿಗೆಗೆ ಕೊಟ್ಟ ಪರಿಹಾರದಂತೆ ಇದೆ. ಹಣ್ಣು, ತರಕಾರಿ ಬೆಳೆಗಾರರ ಪ್ಯಾಕೇಜ್ ಕೂಡಾ ಸರಿಯಿಲ್ಲ.
ಆಟೋ, ಕ್ಯಾಬ್ ಡ್ರೈವರ್ ಗಳಿಗೆ ಈ ಹಣ ಸಾಕಾಗೊಲ್ಲ. ಕಾರ್ಮಿಕರು, ಚಮ್ಮಾರರು, ಕಮ್ಮಾರಿಗೆ ಕೊಟ್ಟ ಹಣ ಯಾವುದಕ್ಕೂ ಸಾಕಾಗೊಲ್ಲ ಎಂದು ಟೀಕಿಸಿದರು.
ಅಕ್ಕಿ ಕೊಡೋದ್ರಲ್ಲೂ ನಾಟಕ ಮಾಡಿದ್ದೀರಾ. 10 ಕೆಜಿ ಅಕ್ಕಿ ಕೂಡಾ ಸಾಕಾಗೊಲ್ಲ. ಇದು ರಾಜ್ಯ ಸರ್ಕಾರದ ನಾಟಕ. ಈ ಪ್ಯಾಕೇಜ್ ಯಾವುದಕ್ಕೂ ಪ್ರಯೋಜನ ಇಲ್ಲ.
ಜನರ ದುಡ್ಡನ್ನು ನೀವು ಲೂಟಿ ಮಾಡ್ತಿದ್ದೀರಾ. ಜನರ ಸಹಕಾರಕ್ಕೆ ಸರ್ಕಾರ ಬರಬೇಕು. ಲೂಟಿ ಮಾಡೋದನ್ನ ಸರ್ಕಾರ ನಿಲ್ಲಿಸಬೇಕು. ನಿಗಮ-ಮಂಡಳಿಗಳಿಗೆ ನೇಮಕ ಮಾಡಿರೋರನ್ನ ರದ್ದು ಮಾಡಿ ಎಂದು ಆಗ್ರಹಿಸಿದರು.