ಆರ್.ಆರ್.ನಗರದಲ್ಲಿ ನಮ್ಮ ಗೆಲುವು ಖಚಿತ : ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು : ರಾಜರಾಜೇಶ್ವರಿ ನಗರದಲ್ಲಿ ಅಂಡರ್ ಕರೆಂಟ್ ಕೆಲಸ ಮಾಡುತ್ತಿದೆ. ನಮ್ಮ ಗೆಲುವು ಖಚಿತ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜರಾಜೇಶ್ವರಿನಗರ ಉಪಚುನಾವಣೆ ಹಿನ್ನೆಲೆ ಪೀಣ್ಯ ಕೈಗಾರಿಕೋದ್ಯಮಿಗಳ ಜೊತೆ ಕುಮಾರಸ್ವಾಮಿ ಅವರು ಸಭೆ ನಡೆಸಿದರು. ಪೀಣ್ಯ ಕೈಗಾರಿಕೋದ್ಯಮ ಸಂಘದಲ್ಲಿ ಅಧ್ಯಕ್ಷ ಪ್ರಕಾಶ್ ಮತ್ತಿತರರೊಂದಿಗೆ ಸಭೆ ನಡೆಸಿದ ಹೆಚ್ಡಿ ಕೆ ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಉಪಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸುತ್ತಿದೆ. ಈ ಬಾರಿ ಜನ ಅವರಿಗೆ ಸರಿಯಾದ ಪಾಠ ಕಲಿಸುತ್ತಾರೆ. ಜನ ಹಣಕ್ಕೆ ಮಾರು ಹೋಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ “ಎರಡು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಎರಡು, ಮೂರು ಸ್ಥಾನಕ್ಕೆ ಸ್ಪರ್ಧೆ” ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೆಚ್ ಡಿಕೆ, ಯಾವ ಆಧಾರದಲ್ಲಿ ಸಿಎಂ ಹಾಗೇ ಹೇಳ್ತಾರೆ.
ಇದನ್ನೂ ಓದಿ : ದೇಶ ಪ್ರೇಮಕ್ಕೂ ಬಿಜೆಪಿಗೂ ಎಲ್ಲಿಂದ ಎಲ್ಲಿಯ ಸಂಬಂಧ : ಸಿದ್ದರಾಮಯ್ಯ
ಅವರಿಗೇನು ಕನಸು ಬಿದ್ದಿತ್ತಾ? ಎಂದು ಟಾಂಗ್ ನೀಡಿದ್ರು. ಆರ್. ಆರ್. ನಗರದಲ್ಲಿ ಅಂಡರ್ ಕರೆಂಟ್ ಕೆಲಸ ಮಾಡುತ್ತಿದೆ. ನಮ್ಮ ಗೆಲುವು ಖಚಿತ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಮುನಿರತ್ನ ಪರ ನಟ ದರ್ಶನ್ ಪ್ರಚಾರದ ಬಗ್ಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಅವರು, ಯಾವ ನಟರ ಪ್ರಚಾರದಿಂದ ಜನ ಮಾರು ಹೋಗುವುದಿಲ್ಲ. ಮತ ಹಾಕುವವರು ಮನೆಯಲ್ಲಿ ಇದ್ದಾರೆ.
ಮತದಾನದ ದಿನ ಅವರು ಬಂದು ಯಾರಿಗೆ ಓಟ್ ಹಾಕಬೇಕು ಅಂತ ಅವರಿಗೆ ಗೊತ್ತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, 17 ಜನರನ್ನು ಮಂತ್ರಿ ಮಾಡ್ತೀನಿ ಅಂತ ಹಿಂದೆಯೇ ಹೇಳಿದ್ರು. ಆ ಮಾತು ಉಳಿಸಿಕೊಳ್ತಿದ್ದಾರೆ. ಈಗ ಮುನಿರತ್ನ ಅವರನ್ನು ಮಂತ್ರಿ ಮಾಡ್ತೀನಿ ಎಂದಿದ್ದಾರೆ.
ಆದರೆ ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಿ. ಉತ್ತರ ಕರ್ನಾಟಕದಲ್ಲಿ ಜನ ಸಾಯ್ತಿದ್ದಾರೆ. ಅವರನ್ನು ಉಳಿಸಿಕೊಳ್ಳುವ ಕೆಲಸ ಸಿಎಂ ಮಾಡಲಿ ಎಂದು ಮುನಿರತ್ನ ಅವರನ್ನು ಸಚಿವರನ್ನಾಗಿ ಮಾಡ್ತೀನಿ ಎಂಬ ಸಿಎಂ ಹೇಳಿಕೆಗೆ ಟಾಂಗ್ ನೀಡಿದರು.
ಇದನ್ನೂ ಓದಿ : ರಾರಾ ಕ್ಷೇತ್ರದಲ್ಲಿ ಸಿಎಂ ರೋಡ್ ಶೋ : ದಡ್ಡು ಮುಟ್ಟಿಲ್ಲ, ಆಣೆ ಮಾಡ್ತೀನಿ ಎಂದ ಮುನಿರತ್ನ
ಇನ್ನು ಈ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿ. ಕೃಷ್ಣ ಮೂರ್ತಿ, ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ಹಾಗೂ ಜೆಡಿಎಸ್ ನಗರ ಅಧ್ಯಕ್ಷ ಪ್ರಕಾಶ್ ಮತ್ತಿತರ ಮುಖಂಡರು ಭಾಗವಹಿಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel