ಹೆಚ್ ಡಿಕೆಗೆ ಕೇಂದ್ರ ಸಚಿವಸ್ಥಾನ | ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಇದು ಹೊಸ ಪ್ಲಾನಾ..?
ಬೆಂಗಳೂರು : ಹೆಚ್.ಡಿ ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ..? ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಇದು ಹೊಸ ಪ್ಲಾನಾ..? ಎನ್ ಡಿಎ ಮಿತ್ರಪಕ್ಷವಾದ್ರೆ ಜೆಡಿಎಸ್ ಗೆ ಲಾಭನಾ..?
ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆಯುವ ಎಲ್ಲ ಸಾಧ್ಯತೆಗಳಿವೆ. ಕಾಂಗ್ರೆಸ್ ಗೆ ಖೆಡ್ಡಾ ತೋಡಲು ದಳಪತಿಗಳು ಮತ್ತು ಕೇಸರಿ ಕಲಿಗಳು ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಬಿಜೆಪಿ ಜೊತೆ ಸೇರಲು ತುದಿಗಾಲಿನಲ್ಲಿ ನಿಂತಿದೆ ಅನ್ನೋ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಹೌದು..! ಶೀಘ್ರದಲ್ಲೇ ರಾಜ್ಯ
ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಒಂದು ನಡೆಯಲಿದೆ. ಎನ್ ಡಿಎ ಮಿತ್ರಪಕ್ಷ ಆಗಲು ಜೆಡಿಎಸ್ ನಿರ್ಧರಿಸಿದ್ದು, ಈ ಸಂಬಂಧ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಜೆಡಿಎಸ್ ನ ಮೂಲಗಳು, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷವನ್ನು ಎನ್ ಡಿಎ ಮಿತ್ರಪಕ್ಷವಾಗಿಸಲು ಮುಂದಾಗಿದ್ದಾರೆ ಅನ್ನೋ ಮಾಹಿತಿಯನ್ನ ತಿಳಿಸಿವೆ. ಇದೇ ಕಾರಣಕ್ಕಾಗಿ ಸರ್ಕಾರ ನಿರ್ಣಯಗಳಿಗೆ ದಳಪತಿ ಜೈ ಅನ್ನುತ್ತಿದ್ದಾರೆ ಅಂತ ಹೇಳಲಾಗುತ್ತಿದೆ. ಅಲ್ಲದೆ ಈ ವಿಚಾರವಾಗಿ ಬಿಜೆಪಿ ಬಿಗ್ ಬಾಸ್ ಗಳ ಜೊತೆ ಹಲವು ಸುತ್ತಿನ ಮಾತುಕತೆಗಳನ್ನೂ ಕೂಡ ಕುಮಾರಸ್ವಾಮಿ ನಡೆಸಿದ್ದಾರಂತೆ.
ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟ್ರಾ ಬಿಎಸ್ ವೈ-ಹೆಚ್ ಡಿಕೆ
ಎನ್ ಡಿ ಎ ಜೊತೆ ಜೆಡಿಎಸ್ ಹೋಗುವ ಹಿಂದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋ ಪ್ಲಾನ್ ಇದೆ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ಯಾಕೆಂದ್ರೆ ಈ ಹಿಂದೆ ಸದನದಲ್ಲಿ ಸಿಎಂ ಬಿಎಸ್ ವೈ ಗರಂ ಆಗಿ ಮಾತನಾಡುವ ಸಂದರ್ಭದಲ್ಲಿ ಮುಂದಿನ 10 ವರ್ಷ ಕಾಂಗ್ರೆಸ್ ಪಕ್ಷವನ್ನ ವಿರೋಧ ಪಕ್ಷದಲ್ಲೇ ಕೂರಿಸುತ್ತೇನೆ ಎಂದು ಶಪಥ ಮಾಡಿದ್ರು. ಅಲ್ಲದೆ ಬಿಜೆಪಿ ನಾಯಕರೂ ಕೂಡ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡೋದೆ ನಮ್ಮ ಧ್ಯೇಯ ಅಂತ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಇದು ಒಂದು ಕಡೆಯಾದ್ರೆ ಮೈತ್ರಿ ಸರ್ಕಾರ ಪತನದ ಬಳಿಕ ಕುಮಾರಸ್ವಾಮಿ ನೇರವಾಗಿ ಕಾಂಗ್ರೆಸ್ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಕಾಂಗ್ರೆಸ್ ನಾಯಕರನ್ನ ಟಾರ್ಗೆಟ್ ಮಾಡಿಕೊಂಡು ಪದೇ ಪದೇ ಟ್ವೀಟ್ ಗಳನ್ನ ಮಾಡುತ್ತಾ ಬಂದಿದ್ದಾರೆ.
ಎನ್ ಡಿಎ ಮಿತ್ರಪಕ್ಷ ಸೇರಲು ಜೆಡಿಎಸ್ ಚಿಂತನೆ ??
ಇದೆಲ್ಲವನ್ನು ಗಮಸಿದ್ರೆ, ಸದ್ಯ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆ ಕಾಮನ್ ಎದುರಾಳಿ ಕಾಂಗ್ರೆಸ್ ಒಂದೇ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನ ಮಟ್ಟ ಹಾಕಲು ಕುಮಾರಸ್ವಾಮಿ, ಬಿಎಸ್ ವೈ ಪ್ಲಾನ್ ಮಾಡಿರಬಹುದು.

ಸಂಕ್ರಾಂತಿ ಬಳಿಕ ಹೆಚ್ ಡಿಕೆ ಹೊಸ ಪ್ಲಾನ್
ಕೆಲ ದಿನಗಳಿಂದೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಪಕ್ಷದ ಕಚೇರಿಯಲ್ಲಿ ಮಾತನಾಡುತ್ತ, ಸಂಕ್ರಾಂತಿ ಬಳಿಕ ಜೆಡಿಎಸ್ ಬದಲಾಗಳಿದೆ. ಕುಮಾರಸ್ವಾಮಿ ಹೊಸ ಪ್ಲಾನ್ ಮಾಡಿದ್ದು, ಅದರಂತೆ ಎಲ್ಲರೂ ನಡೆಯಬೇಕೆಂದು ಕಾರ್ಯಕರ್ತರಿಗೆ ತಿಳಿಸಿದ್ದರು. ಬಹುಶಃ ಆ ಪ್ಲಾನ್ ಇದೇ ಇರ್ಬೋದಾ..? ದೇವರಿಗೆ ಗೊತ್ತು.
ಜೆಡಿಎಸ್ ಗೆ ಲಾಭವೇನು..?
ಇನ್ನು ಈ ಮೈತ್ರಿಯಿಂದ ಜೆಡಿಎಸ್ ಗೆ ಆಗುವ ಲಾಭಗಳೇನು ಅಂತ ನೋಡೋದಾದ್ರೆ, ಮುಂದಿನ ವರ್ಷ ಜೂನ್ ನಲ್ಲಿ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗಲಿದ್ದು, ಅದರಲ್ಲಿ ಒಂದು ಸ್ಥಾನ ಜೆಡಿಎಸ್ ಸುಲಭವಾಗಲಿ ಗೆಲ್ಲಲಿದೆ. ಆ ಸ್ಥಾನದಲ್ಲಿ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಕೇಂದ್ರದಲ್ಲಿ ಅವರನ್ನು ಸಚಿವರನ್ನಾಗಿ ಮಾಡೋದು ಬಿಜೆಪಿ ಪ್ಲಾನ್. ಇದೇ ಆದಲ್ಲಿ ಕುಮಾರಸ್ವಾಮಿ ಸಚಿವರಾದ್ರೆ ರಾಜ್ಯದಲ್ಲಿ ಜೆಡಿಎಸ್ ಗೆ ಇಂಚೂರು ಬಲ ಬರುತ್ತೆ. ಆರ್ಥಿಕವಾಗಿ ಸ್ಟ್ರಾಂಗ್ ಆಗುತ್ತೆ. ಮುಂದಿನ ಚುನಾವಣೆಗಳಲ್ಲಿ ಮೈತ್ರಿ ಮಾಡಿಕೊಂಡು ಗೆದ್ದಾಗ ಜೆಡಿಎಸ್ ಪಕ್ಷ ಅಧಿಕಾರದಲ್ಲಿರುವಂತೆ ಆಗುತ್ತೆ. ಸಾಮಾನ್ಯವಾಗಿ ಯಾವುದೇ ಪಕ್ಷ ಅಧಿಕಾರದಲ್ಲಿದ್ರೆ ಅದರ ಕಾರ್ಯಕರ್ತರು ಮತ್ತಷ್ಟು ಹುಮ್ಮಸ್ಸಿನಿಂದ ಕೆಲಸ ಮಾಡ್ತಾರೆ. ಅದು ಪಕ್ಷಕ್ಕೂ ಲಾಭ ಕೂಡ ಹೌದು..!
ಕೊನೆಯದಾಗಿ ಹೆಚ್ ಡಿ ಕುಮಾರಸ್ವಾಮಿ ಒಂದು ಏಟಿಗೆ ಎರಡು ಹಕ್ಕಿ ಅನ್ನೋ ಪ್ಲಾನ್ ನಲ್ಲಿ ಇದ್ದಾರಾ..? ಜೆಡಿಎಸ್ ಬಿಜೆಪಿ ಜೊತೆ ಸೇರುತ್ತಾ… ಈ ಪ್ರಶ್ನೆಗಳಿಗೆ ಕಾಲವೆ ಉತ್ತರಿಸಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








