ರೆಬೆಲ್ ಜೆಡಿಎಸ್ ಶಾಸಕರಿಗೆ ಕುಮಾರಸ್ವಾಮಿ ಟಾಂಗ್
ರಾಮನಗರ: ಸಚಿವ ಸಿ.ಪಿ ಯೋಗೇಶ್ವರ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಹಾವು-ಮುಂಗುಸಿಯಂತೆ ಆಡುತ್ತಿದ್ದಾರೆ. ಕಳೆದವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಿ.ಪಿ ಯೋಗೇಶ್ವರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ಮುಂದುವರೆಸಿದ್ದಾರೆ.
ಪಂಡಿತ್ ದೈವಜ್ಞ ಪ್ರಧಾನ ತಾಂತ್ರಿಕ್ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ, ಸಿ.ಪಿ ಯೋಗೇಶ್ವರ್ ಈಗ ಮಂತ್ರಿಯಾದ್ರು, ಇನ್ನು ಪೊಗರ್ ದಸ್ತಾಗಿ ಕೆಲಸ ಮಾಡಲು ಅನುಕೂಲವಾಯ್ತು. ಮೊದಲು ತಾಲೂಕು ಮಟ್ಟದಲ್ಲಿ ನಡೆಯುತ್ತಿತ್ತು, ಈಗ ಹಣ ಮಾಡಲು ರಾಜ್ಯ ಮಟ್ಟದಲ್ಲಿ ಅಧಿಕಾರ ಕೊಟ್ಟಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ಮಂತ್ರಿಗಳನ್ನು ನೋಡಿದ್ದೇನೆ. ಮಂತ್ರಿಗೆ ಏನ್ ಕೊಂಬಿರುತ್ತಾ ಎಂದು ಪ್ರಶ್ನಿಸಿರುವ ಹೆಚ್‍ಡಿಕೆ, ನನಗೆ ಯಾವ ರೀತಿಯ ಭಯವಿಲ್ಲ. ನಾನು ಸಿಎಂ ಆಗಿದ್ದೆ, ಮಂತ್ರಿಗಳನ್ನು ನೋಡಿದ್ದೇನೆ. ಮುಖ್ಯಮಂತ್ರಿಗಳನ್ನೂ ನೋಡಿದ್ದೇನೆ. ಜನ ನಮಗೆ ದೆಹಲಿಯನ್ನು ತೋರಿಸಿದ್ದಾರೆ. ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಲಿ. ಬಡವರ ಪರವಾಗಿ ಕೆಲಸ ಮಾಡಲಿ, ಬಡವರಿಂದ ಹಣ ಲೂಟಿ ಮಾಡಬಾರದು ಎಂದು ಸಚಿವ ಯೋಗೇಶ್ವರ್ ಗೆ ತಿರುಗೇಟು ನೀಡಿದ್ದಾರೆ.
ಯೋಗೇಶ್ವರ್ ಹಾಗೂ ನಾನು ವೈಯಕ್ತಿಕವಾಗಿ ಸ್ನೇಹಿತರು. ಆದರೆ ಕಾರ್ಯಕರ್ತರ ಕುತ್ತಿಗೆ ಕೊಯ್ದು ಸ್ನೇಹ ಉಳಿಸಿಕೊಳ್ಳಲು ಆಗಲ್ಲ. ವೈಯಕ್ತಿಕ ಸ್ನೇಹ ಬೇರೆ, ರಾಜಕೀಯ ಬೇರೆ. ಯಡಿಯೂರಪ್ಪನವರು ನನಗೆ ಸ್ನೇಹಿತರು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರೋದು ಅದನ್ನೆ ಎಂದು ಕುಮಾರಸ್ವಾಮಿ ದ್ವಂದ್ವ ಹೇಳಿಕೆ ನೀಡಿದ್ದಾರೆ.
ರೆಬೆಲ್ ಜೆಡಿಎಸ್ ಶಾಸಕರಿಗೆ ಕುಮಾರಸ್ವಾಮಿ ಟಾಂಗ್
ಜೆಡಿಎಸ್ ಕೋರ್ ಕಮಿಟಿಯಲ್ಲಿ ಜಿ.ಟಿ.ದೇವೇಗೌಡರ ಹೆಸರು ಕೈಬಿಟ್ಟ ವಿಚಾರದ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರಿಗೆ ಪಕ್ಷದ ಸಂಘಟನೆ ಬಗ್ಗೆ ಆಸಕ್ತಿಯಿಲ್ಲ. ಜಿ.ಟಿ ದೇವೇಗೌಡರೇ ನನಗೆ ನನ್ನ ಕ್ಷೇತ್ರ ಮುಖ್ಯ ಎಂದಿದ್ದಾರೆ. ಹೀಗಾಗಿ ಪಕ್ಷದ ಸಂಘಟನೆಗೆ ಸಮಯ ಕೊಡಲು ಆಗಲ್ಲ ಎಂದಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನ ಬಂದಿದೆ. ಹಾಗಾಗಿ ಕೇವಲ ವಿಸಿಟಿಂಗ್ ಕಾರ್ಡ್ ಗಾಗಿ ನಾನು ಅವಕಾಶ ಕೊಡ್ಲಾ ಎಂದು ತಿರುಗೇಟು ನೀಡಿದ್ದಾರೆ.
ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಬಸವರಾಜ ಹೊರಟ್ಟಿಯವರಿಗೆ ವಯಸ್ಸಾಗಿಲ್ಲವೇ. ಜೆ.ಪಿ ಭವನದಲ್ಲಿ ಬಂದು ದೇವೇಗೌಡರ ಜೊತೆಗೆ ಬಂದು ಚರ್ಚೆ ಮಾಡಲಿ. ಕೋರ್ ಕಮಿಟಿಯಲ್ಲಿ ಕೆಲಸ ಮಾಡುವವರಿಗೆ ಅವಕಾಶ ಕೊಡಲಾಗಿದೆ ಎಂದರು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಮುಂದಿನ ಚುನಾವಣೆ ಬಂದಾಗ ಯಾರ್ಯಾರು ಎಲ್ಲಿರುತ್ತಾರೋ ಗೊತ್ತಿಲ್ಲ. ಇವತ್ತು ಪಕ್ಷ ನಿಷ್ಠೆಗಿಂತಲೂ ಅವರ ಸ್ಥಾನಮಾನಗಳೇ ಮುಖ್ಯ. ಕಾರ್ಯಕರ್ತರ ಶ್ರಮ, ಕಷ್ಟಸುಃಖದ ಬಗ್ಗೆ ಯಾರಿಗೂ ಅರಿವಿಲ್ಲ. ಕಾರ್ಯಕರ್ತರನ್ನ ನಂಬಿ ರಾಜಕಾರಣ ಮಾಡ್ತೇವೆ. 30 ಜಿಲ್ಲೆಗಳಲ್ಲೂ ಪಕ್ಷದ ಹೊಸ ಪದಾಧಿಕಾರಿಗಳು ನೇಮಕ ಮಾಡಲಾಗುವುದು. ಈಗಾಗಲೇ ಎಲ್ಲಾ ರೀತಿಯ ತಯಾರಿ ನಡೆದಿದೆ. ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel