ಕಲಬುರಗಿ: ವ್ಯಕ್ತಿಯೊಬ್ಬರು ಚಲಿಸುತ್ತಿದ್ದ ಬಸ್ ನಲ್ಲಿಯೇ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಜಿಲ್ಲೆಯ ಕಮಲಾಪುರ ಹತ್ತಿರ ಈ ಘಟನೆ ನಡೆದಿದೆ. ವಿಜಯಕುಮಾರ್ ಶಿವಶರಣಪ್ಪ ನಾಗನಳ್ಳಿ(45) ಹೃದಯಾಘಾತಕ್ಕೆ ಬಲಿಯಾಗಿರುವ ದುರ್ದೈವಿ. ಸಾವನ್ನಪ್ಪಿದ ವಿಜಯಕುಮಾರ್ ಜಿಲ್ಲೆಯ ಮೂಲತಃ ನಾಗನಹಳ್ಳಿಯವರು ಎನ್ನಲಾಗಿದೆ. ಇವರು ಪಟ್ಟಣದದಿಂದ ಭಾಲ್ಕಿಗೆ ತಮ್ಮ ಸಹೋದರಿ ಮನೆಗೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ಈ ಸಂದರ್ಭದಲ್ಲಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಹೃದಯಾಘಾತವಾಗುತ್ತಿದ್ದಂತೆ ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ಯತ್ನ ನಡೆದಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.