Sonali Phogat : ಕೊಲೆ ಪ್ರಕರಣ ದಾಖಲಿಸಿದ ಗೋವಾ ಪೊಲೀಸರು…
ಹರಿಯಾಣ BJP ನಾಯಕಿ ಮತ್ತು ನಟಿ ಸೋನಾಲಿ ಪೋಗಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಕೊಲೆ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ. ನಟಿಯ ಸಹೋದರರು ಇಬ್ಬರ ವ್ಯಕ್ತಿಗಳನ್ನ ಹೆಸರಿಸಿ ದೂರು ದಾಖಲಿಸಿದ್ದಾರೆ.
ಆಕೆಯ ಸಹೋದರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ತನಿಖೆ ನಡೆಯುತ್ತಿದೆ ”ಎಂದು ಸೋನಾಲಿ ಪೋಗಟ್ ಸಾವನ್ನಪ್ಪಿದ ಎರಡು ದಿನಗಳ ನಂತರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಹೋದರ ರಿಂಕು ಢಾಕಾ ತನ್ನ ಸಹೋದರಿಯ ಸಾವು ಪೂರ್ವ ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ. “ಮಂಗಳವಾರ ಸಂಜೆ ಗೋವಾ ಬಂದ ನಂತರ ನಾನು ಸ್ವಂತವಾಗಿ ಒಂದಿಷ್ಟು ವಿಚಾರಣೆ ನಡಸಿದ್ದೇನೆ ಇದು ಸಾಮಾನ್ಯ ಸಾವಲ್ಲ ಎಂದಿದ್ದಾರೆ.
ಅವರು ಸೋನಾಲಿ ಫೋಗಟ್ನ ಮ್ಯಾನೇಜರ್ ಸುಧೀರ್ ಸಂಗ್ವಾನ್ ಮತ್ತು ಒಬ್ಬ ಸುಖ್ವಿಂದರ್ ಸಿಂಗ್ ಅವರ ಮೇಲೆ ಆರೋಪ ಹೊರಿಸಿದ್ದಾರೆ. “ಅವರು ಅನೇಕ ದಿನಗಳಿಂದ ಇದನ್ನ ಪ್ಲಾನ್ ಮಾಡಿದ್ದಾರೆ. ಕೊಲೆ ನಡೆದ ದಿನ ಆಕೆ ತನ್ನ ತಾಯಿ, ತಂಗಿ, ನನ್ನ ಹಾಗೂ ಇತರರ ಜತೆ ಮಾತನಾಡಿದ್ದಾಳೆ. ಆಕೆಯ ಸಂಭಾಷಣೆಗಳಿಂದ ಆಕೆ ಸಂಕಷ್ಟಕ್ಕೆ ಸಿಲುಕಿದ್ದು, ಯಾವಾಗಾ ಏನ್ ಬೇಕಾದ್ರೂ ಆಗಬಹುದು ಎಂಬುದು ಖಚಿತವಾಗಿದೆ. ನಾವು ಆಕೆಗೆ ದೂರವಿರಲು ಹೇಳುತ್ತಿದ್ದೆವು ಮತ್ತು ಪೊಲೀಸ್ ಕಂಪ್ಲೆಟ್ ಕೊಡಲು ಹೇಳಿದ್ದೆವು. ಆದರೆ ಅದೇ ರಾತ್ರಿ ಅವರು ನಿಧನದರಾದರು ಎಂದು ಸಹೋದರ ಹೇಳಿದ್ದಾನೆ.
ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಕೊಲೆ ಪ್ರಕರಣ ದಾಖಲಿಸಲು ವಿಳಂಬವಾಗುತ್ತಿರುವುದಕ್ಕೆ ಬೇಸರಗೊಂಡ ಆಕೆಯ ಕುಟುಂಬದವರು ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು.