ಆತ ವಿಶ್ವಶ್ರೇಷ್ಠದ ಬೌಲರ್ : ಬುಮ್ರಾ ಬಗ್ಗೆ ಜಹೀರ್ ಮೆಚ್ಚುಗೆ Bumra saaksha tv
ದಕ್ಷಿಣಾ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಸಕಲ ರೀತಿಯಲ್ಲೂ ಸಿದ್ಧವಾಗುತಿದೆ.
ಈ ಸರಣಿಯ ಭಾಗವಾಗಿ ಡಿಸೆಂಬರ್ 26 ರಂದು ಸೆಂಚೂರಿಯನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.
ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಪೇಸರ್ ಜಸ್ಪ್ರೀತ್ ಬೂಮ್ರಾ ಮೇಲೆ ಟೀಂ ಇಂಡಿಯಾ ಮಾಜಿ ಬೌಲರ್ ಜಹೀರ್ ಖಾನ್ ಪ್ರಶಂಸೆಗಳ ಸುರಿಮಳೆ ಗೈದಿದ್ದಾರೆ.
ಅದೇ ರೀತಿ ಟೀಂ ಇಂಡಿಯಾದ ವೇಗದ ವಿಭಾಗವು ಅದ್ಭುತವಾಗಿದೆ. ವಿಶ್ವದ ಶ್ರೇಷ್ಠ ಬೌಲರ್ ಗಳಲ್ಲಿ ಜಸ್ಪ್ರೀತ್ ಬೂಮ್ರಾ ಕೂಡ ಒಬ್ಬರು ಎಂದಿದ್ದಾರೆ.
ಇತ್ತೀಚೆಗಷ್ಟೇ ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ಪ್ರವಾಸದಲ್ಲಿ ಭಾರತ ತಂಡದ ಯಶಸ್ಸು ಕಂಡಿದೆ. ಈ ಪ್ರವಾಸದಲ್ಲಿ ಬುಮ್ರಾ ತನ್ನ ಪೇಸ್ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದರು.
ಇನ್ನು ಭಾರತ ಬೌಲಿಂಗ್ ವಿಭಾಗ ಅದ್ಭುತವಾಗಿದೆ. ಅದೇ ರೀತಿಯಲ್ಲಿ ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾ ಸಾಧಿಸಿರುತ್ತಿರುವ ವಿಜಯಗಳಲ್ಲಿ ವೇಗದ ವಿಭಾಗ ಪ್ರಮುಖ ಪಾತ್ರ ವಹಿಸುತ್ತಿದೆ.
ಶ್ರೇಷ್ಠ ಬ್ಯಾಟರ್ ಗಳನ್ನ ಕಾಡಬಲ್ಲ ಬೌಲರ್ ಗಳು ನಮ್ಮಲ್ಲಿದ್ದಾರೆ. ಹಿರಿಯ ಬೌಲರ್ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ತಂಡದಲ್ಲಿರುವುದು ಪ್ಲಸ್ ಪಾಯಿಂಟ್ ಆಗಿದೆ ಎಂದು ಜಹೀರ್ ಹೇಳಿದ್ದಾರೆ.









