ಕಲಬುರಗಿ: ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಆತನ ಪತ್ನಿಯ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಹೊರವಲಯದ ಕೆಸರಟಗಿಯಲ್ಲಿ ನಡೆದಿದೆ.
ಕಪಿಲ್ ಗಾಯಕ್ವಾಡ್ (38) ಕೊಲೆಯಾದ ವ್ಯಕ್ತಿ. ಪತ್ನಿಯ ಸಮ್ಮುಖದಲ್ಲೆ ಕಪಿಲ್ ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಸೆಂಟ್ರಿಂಗ್ ಕೆಲಸ ಮುಗಿಸಿಕೊಂಡು ಕೆಸರಟಗಿ ಹತ್ತಿರ ರೈಲ್ವೆ ಅಂಡರ್ ಬ್ರೀಡ್ಜ್ ಹತ್ತಿರ ತೆರಳುತ್ತಿರುವಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.
ಕಪೀಲ್ ಕುಟುಂಬಸ್ಥರು ಆತನ ಪತ್ನಿಯ ವಿರುದ್ಧ ಕೊಲೆ ಆರೋಪ ಮಾಡಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








