DR K Sudakar | ಸರ್ಕಾರದ ವರ್ಚಸ್ಸಿಗೆ ಮಸಿ ಬಳೆಯಲು ಸಾಮಾಜಿಕ ಜಾಲತಾಣಗಳ ದುರ್ಬಳಕೆ
ಬೆಂಗಳೂರು : ಸರ್ಕಾರದ ವರ್ಚಸ್ಸಿಗೆ ಮಸಿ ಬಳೆಯಲು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಆರೋಪಿಸಿದ್ದಾರೆ. ಕಾಂಗ್ರೆಸ್ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಸುಧಾಕರ್ ಕಿಡಿಕಾರಿದ್ದಾರೆ.
ಸುಧಾಕರ್ ತಮ್ಮ ಟ್ವೀಟ್ ನಲ್ಲಿ.. ಇತ್ತೀಚೆಗೆ ಸುಳ್ಳುಗಳ ಕಂತೆಯನ್ನೇ ಸತ್ಯ ಎಂದು ಬಿಂಬಿಸುವ ರಾಜಕೀಯ ದೊಂಬರಾಟ ರಾಜ್ಯದಲ್ಲಿ ನಡೆಯುತ್ತಿದೆ. ಆಧಾರ ರಹಿತ, ದಾಖಲೆಗಳೇ ಇಲ್ಲದ ಆರೋಪಗಳ ಮೂಲಕ ಸರ್ಕಾರದ ವರ್ಚಸ್ಸಿಗೆ ಮಸಿ ಬಳೆಯುವ ಮತ್ತು ಸಚಿವರ ತೇಜೋವಧೆ ಮಾಡುವ ಹುನ್ನಾರ ನಡೆದಿದೆ.
ಇದಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿರುವ ಕೆಲವರ ಮೂಲಕ ದೂರುಗಳನ್ನು ಕೊಡಿಸಿ ದೊಡ್ಡ ಹಗರಣ, ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸುವ ಕಸರತ್ತು ನಡೆಯುತ್ತಿದೆ.
https://twitter.com/mla_sudhakar/status/1515908975325491200?s=20&t=Pg8F9_DmVkO7DWbV9BIRww
ಇವರ ಆರೋಪಗಳಲ್ಲಿ ಸತ್ಯಾಂಶ ಇದ್ದಲ್ಲಿ, ದಾಖಲೆಗಳು ಇದ್ದಲ್ಲಿ ಎಸಿಬಿ, ಲೋಕಾಯುಕ್ತ ಇಲ್ಲವೇ ಕೋರ್ಟ್‌ಗಳಿಗೆ ದೂರು ನೀಡಬಹುದು. ಆದರೆ ಇವರಿಗೆ ಸತ್ಯ ಬೇಕಾಗಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದು ಇವರ ಏಕೈಕ ಉದ್ದೇಶ. ರಚನಾತ್ಮಕ ಪ್ರತಿಪಕ್ಷವಾಗಿ ವಿಫಲರಾಗಿರುವ ಕಾಂಗ್ರೆಸ್ ನಾಯಕರ ಕುತಂತ್ರ ರಾಜಕಾರಣ ಇದು. ಪ್ರತಿಭಟನೆ ಹೆಸರಿನಲ್ಲಿ ಪ್ರತಿದಿನ ಬೀದಿ ನಾಟಕ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಹಿಂದೆ ಇವರು ಅಧಿಕಾರದಲ್ಲಿದ್ದಾಗ ಹಗರಣಗಳ ಕೆಸರಿನಲ್ಲೇ ಮುಳುಗಿ ಹೋಗಿದ್ದರು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಈಗ ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕುವ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ.
ಬಿಜೆಪಿ ಸರರ್ಕಾರ ಬಂದು ಮೂರು ವರ್ಷ ಕಾಂಗ್ರೆಸ್ ನಾಯಕರು ನಿದ್ರಾವಸ್ಥೆಯಲ್ಲಿದ್ದರು. ಚುನಾವಣೆಗೆ ಇನ್ನೇನು ಒಂದು ವರ್ಷ ಇದೆ ಅನ್ನುವಾಗ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂದು ಇಂಥ ವಾಮಮಾರ್ಗ ಹಿಡಿದಿದ್ದಾರೆ.
https://twitter.com/mla_sudhakar/status/1515908981075722246?s=20&t=Pg8F9_DmVkO7DWbV9BIRww
ಮೌಲ್ಯಾಧಾರಿತ ರಾಜಕಾರಣಕ್ಕೆ, ಆರೋಗ್ಯಕರ ಸ್ಪರ್ಧೆಗೆ ಕರ್ನಾಟಕ ದೇಶಕ್ಕೆ ಮಾದರಿಯಾಗಿತ್ತು. ಕೀಳು ಮಟ್ಟದ ಕುತಂತ್ರಿ ರಾಜಕಾರಣದ ಮೂಲಕ ಅಂತಹ ಉನ್ನತ ಪರಂಪರೆಗೆ ಕಾಂಗ್ರೆಸ್ ನಾಯಕರು ತಿಲಾಂಜಲಿ ಇಡುತ್ತಿದ್ದಾರೆ ಎಂದು ದೂರಿದ್ದಾರೆ.
ಒಳ್ಳೇ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕತೆಯಿದೆ? ಹಗರಣಗಳ ಭೂತವನ್ನೇ ಬೆನ್ನಿಗೆ ಕಟ್ಟಿಕೊಂಡಿರುವ ಇವರ ಬಯಲಾಟವನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಚನಾತ್ಮಕ ಚಟುವಟಿಕೆಗಳ ಮೂಲಕ ಜನರ ಮುಂದೆ ಹೋಗಲಿ.
https://twitter.com/mla_sudhakar/status/1515908989363822594?s=20&t=Pg8F9_DmVkO7DWbV9BIRww
ಅಧಿಕಾರಕ್ಕೆ ಬಂದೆ ಬಿಟ್ಟೆವು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರ ಜತೆ ಕೆಲ ಹಿತಶತ್ರುಗಳು ಕೈಜೋಡಿಸಿ ಷಡ್ಯಂತ್ರ ನಡೆಸಿರುವ ಎಲ್ಲ ಮಾಹಿತಿಯಿದೆ. ಇವರ ಮುಖವಾಡಗಳನ್ನು ಕಳಚಿ ಬೆತ್ತಲು ಮಾಡುವ ದಿನ ದೂರವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಸುಧಾಕರ್ ಕಿಡಿಕಾರಿದ್ದಾರೆ. health minister dr k sudhakar slams congress







