“ ವಿಶ್ವಾದ್ಯಂತ 300 ಕೋಟಿ ಜನರಿಗೆ ಆರೋಗ್ಯಕರ ಆಹಾರ ಖರೀದಿಸುವ ಸಾಮರ್ಥ್ಯ ಇಲ್ಲ”
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಭಾರತದಲ್ಲೂ ಇದೆ..
ಈ ನಡುವೆ ವಿಶ್ವಾದ್ಯಂತ ಅದೆಷ್ಟೋ ಕೋಟಿ ಜನರು ಸರಿಯಾದ ಆರೋಗ್ಯಕರ ಆಹಾರ ಪಡೆಯಲು ಸಾಧ್ಯವಾಗ್ತಿಲ್ಲ ಎಂಬ ಆಘಾತಕಾರಿ ಮಾಹಿತಿಯೊಂದನ್ನ ಅಧ್ಯಯನ ತಿಳಿಸಿದೆ. ಕೋವಿಡ್ ಗೂ ಮುಂಚೆಯಿಂದಲೇ ಇಂತಹ ಪರಿಸ್ಥಿತಿ ಇದೆ. 300 ಕೋಟಿಗೂ ಹೆಚ್ಚು ಜನರಿಗೆ ಆರೋಗ್ಯಕರ ಆಹಾರ ಕೈಗೆಟುಕುವ ಬೆಲೆಯಲ್ಲಿ ಲಭ್ಯವಿರಲಿಲ್ಲ. ಕಡಿಮೆ ಆದಾಯ ಮತ್ತು ಆರೋಗ್ಯಕರ ಆಹಾರಗಳು ದುಬಾರಿಯಾಗಿದೆ. ಹಾಗಾಗಿ ಜಾಗತಿಕವಾಗಿ ಶೇಕಡ 40ರಷ್ಟು ಜನರು ಕಳಪೆ ಗುಣಮಟ್ಟದ ಆಹಾರವನ್ನು ಸೇವಿಸುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯರು ಅಪೌಷ್ಟಿಕತೆ, ರಕ್ತಹೀನತೆ ಮತ್ತು ಮಧುಮೇಹದಂತಹ ಆಹಾರ ಸಂಬಂಧಿತ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವಾಗಿದೆ’ ಎಂದು ಜಾಗತಿಕ ಆಹಾರ ಬೆಲೆಯ ಕುರಿತ ಇತ್ತೀಚಿನ ಅಂಕಿಅಂಶಗಳಿಂದ ತಿಳಿದುಬಂದಿದೆ.
ವಿಶ್ವದ 790 ಕೋಟಿ ಜನಸಂಖ್ಯೆಯಲ್ಲಿ ಶೇಕಡ 60ರಷ್ಟು ಜನರು ಆರೋಗ್ಯಕರ ಆಹಾರ ಖರೀದಿಸಬಲ್ಲರು. ಆದರೆ ಅವರು ಅಡುಗೆ ಸಮಯ ಉಳಿಸಲು, ಜಾಹಿರಾತುಗಳಿಗೆ ಮಾರು ಹೋಗಿ ಆರೋಗ್ಯಕರವಲ್ಲದ ಆಹಾರವನ್ನು ಖರೀದಿಸುವ ಸಂದರ್ಭ ಒದಗಬಹುದು ಎಂದು ಹೇಳಲಾಗಿದೆ. 174 ದೇಶಗಳ ಸುಮಾರು 800 ಜನಪ್ರಿಯ ಆಹಾರಗಳ ಬೆಲೆಗಳನ್ನು ವಿಶ್ಲೇಷಿಸಲಾಗಿದೆ. ಇದಕ್ಕಾಗಿ ವಿಶ್ವಬ್ಯಾಂಕಿನ ದತ್ತಾಂಶವನ್ನು ಪಡೆಯಲಾಗಿದೆ.
ಅಮೆರಿಕದ ಬಹುತೇಕ ನಾಗರಿಕರು ಅಕ್ಕಿ, ಧಾನ್ಯಗಳು, ಸೊಪ್ಪು, ಹಾಲು ಸೇರಿದಂತೆ ಇತರ ಆರೋಗ್ಯಕರ ಆಹಾರ ವಸ್ತುಗಳನ್ನು ಖರೀದಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಆದರೆ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದ ಬಹುತೇಕ ಜನರಿಗೆ ಆರೋಗ್ಯಕರ ಆಹಾರ ಖಾದ್ಯಗಳು ಕೈಗೆಟುಕುವ ಬೆಲೆಯಲ್ಲಿ ಇಲ್ಲ. ಹೆಚ್ಚಿನ ವೇತನದ ಉದ್ಯೋಗಗಳ ಸೃಷ್ಟಿ ಮತ್ತು ಕಡಿಮೆ ಆದಾಯ ಗಳಿಸುವ ಜನರಿಗೆ ಸಾಮಾಜಿಕ ರಕ್ಷಣೆ ನೀಡುವ ಮೂಲಕ ರಾಷ್ಟ್ರಗಳು ಪ್ರತಿಯೊಬ್ಬರಿಗೂ ಆರೋಗ್ಯಕರ ಆಹಾರವನ್ನು ಒದಗಿಸಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!