ನೈಜೀರಿಯಾದಲ್ಲಿ ದೊಡ್ಡ ಅಗ್ನಿ ದುರಂತವೊಂದು ಸಂಭವಿಸಿದೆ.
ಗ್ಯಾಸೋಲಿನ್ ಟ್ಯಾಂಕರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ 70ಕ್ಕೂ ಅಧಿಕ ಜನರು ಸಾವನ್ನಪ್ಪಿ, 56ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಷ್ಟ್ರೀಯ ತುರ್ತು ನಿರ್ವಹಣಾ ಏಜೆನ್ಸಿ ಮುಖ್ಯಸ್ಥ ಹುಸೇನಿ ಇಸಾ ಈ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇಂಧನ ವರ್ಗಾವಣೆ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಒಂದು ಟ್ಯಾಂಕರ್ ನಿಂದ ಇನ್ನೊಂದು ಟ್ಯಾಂಕರ್ ಗೆ ಪೆಟ್ರೋಲ್ ವರ್ಗಾವಣೆಯಾಗುತ್ತಿತ್ತು. ಆಗ ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿದೆ. ಡಿಕ್ಕೊ ಪ್ರದೇಶದ ಹಲವಾರು ನಿವಾಸಿಗಳು ಗ್ಯಾಸೋಲಿನ್ ಟ್ಯಾಂಕರ್‌ನಿಂದ ಭಾರಿ ಸ್ಫೋಟದಿಂದ ಗಾಯಗೊಂಡಿದ್ದಾರೆ. ಆಫ್ರಿಕಾ ದೊಡ್ಡ ತೈಲ ಉತ್ಪಾದಿಸುವ ದೇಶವಾಗಿದ್ದು, ಅಲ್ಲಿ ಇಂತಹ ಘಟನೆಗಳು ಸಾಮಾನ್ಯ ಎನ್ನುವಂತಾಗಿದೆ.