ಆಸ್ಟ್ರೇಲಿಯದಲ್ಲಿ ಭೀಕರ ಪ್ರಹಾಹ : 50 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಮಳೆ..!
ಆಸ್ಟ್ರೇಲಿಯಾ : ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ವರುಣನ ರೌದ್ರಾವತಾರಕ್ಕೆ ಪ್ರವಾಹ ಸೃಷ್ಟಿಯಾಗಿದೆ. ಜನರು ನೆರೆ ಹಾವಳಿಯಿಂದಾಗಿ ಕಂಗಾಲಾಗಿದ್ದಾರೆ.
ಇನ್ನೂ ಕಳೆದ 50 ವರ್ಷಗಳಲ್ಲೇ ಇಲ್ಲಿ ಗರಿಷ್ಠ ಮಳೆ ಸುರಿದಿದ್ದು, ಹಲವು ಪ್ರದೇಶಗಳು ನೆರೆಗೆ ತುತ್ತಾಗಿವೆ. ನೆರೆಪೀಡಿತ ಪ್ರದೇಶಗಳಿಂದ ಜನರನ್ನ ಸುರಕ್ಷಿತ ಸ್ಥಳಗಳಿಗೆರ ಸ್ಥಳಾಂತರಿಸಲಾಗಿದ್ದು, ಸಹಾಯವಾಣಿಯನ್ನ ತೆರೆಯಲಾಗಿದೆ.
ಪ್ರವಾಹದಲ್ಲಿ ನೂರಾರು ಮನೆಗಳು ಹಾನಿಗೀಡಾಗಿವೆ. ಸಿಡ್ನಿಯ ತಗ್ಗು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ನರಕವಾಗಿದೆ ಮ್ಯಾನ್ಮಾರ್… ಕರೇನ್ ಜನಾಂಗದ ಮೇಲೆ ಸೇನಾದಬ್ಬಾಳಿಕೆ..!








