Heavy Rain | ಜಿಲ್ಲಾಡಳಿತದ ಸೂಚನೆಗೆ ಡೋಂಟ್ ಕೇರ್.. ನದಿಗಿಳಿದ ಮೀನುಗಾರರು
ಯಾದಗಿರಿ : ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದೆ.
ಹೀಗಾಗಿ ಭೀಮಾನದಿಯ ಗುರಸುಣಗಿ ಬ್ಯಾರೇಜ್ ಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ.
ಇದರಿಂದಾಗಿ ಗುರಸುಣಗಿ ಬ್ಯಾರೇಜ್ ನಿಂದ ಭೀಮಾನದಿಗೆ 17 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.

ಹೀಗಾಗಿ ಭೀಮಾ ಹಾಗೂ ಕೃಷ್ಣಾ ನದಿಗಳು ಅಪಾಯದ ಮಟ್ಟ ಬೀರಿ ಹರಿಯುತ್ತಿವೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನದಿಗೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
ಆದ್ರೆ ಈ ಜಿಲ್ಲಾಡಳಿತದ ಈ ಆದೇಶಕ್ಕೆ ಮೀನುಗಾರರು ಸೊಪ್ಪಾಕದೇ ಮೀನುಗಾರಿಕೆಗಾಗಿ ನದಿಗೆ ಇಳಿದಿದ್ದಾರೆ.
ಇದು ಸಾರ್ವಜನಿಕರ ಕಂಗೆಣ್ಣಿಗೆ ಗುರಿಯಾಗಿದೆ.