ಬೆಳಗಾವಿ: ಕಳೆದ ವರ್ಷ ರಾಜ್ಯದ ಹಲವೆಡೆ ಭೀಕರ ಬರ ಆವರಿಸಿತ್ತು. ಇದರಿಂದ ಕಂಗೆಟ್ಟಿದ್ದ ರಾಜ್ಯದ ಜನರು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಈ ಬಾರಿ ಹಲವೆಡೆ ಭರ್ಜರಿ ಮಳೆಯಾಗುತ್ತಿದ್ದರೆ, ಹಲವೆಡೆ ಬರದ ಛಾಯೆ ಆವರಿಸುತ್ತಿದೆ.
ಬೆಳಗಾವಿ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾತ್ರ ಬರದ ಬರೆ (drought) ಮುಂದುವರಿದಿದೆ. ಮೂರು ನದಿಗಳ ನಾಡು ಬೆಳಗಾವಿಯಲ್ಲಿ ಬರ ಆವರಿಸಿದ ವಾತಾವರಣವಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಬಹಳಷ್ಟು ಕೆರೆ ಕಟ್ಟೆಗಳು ಖಾಲಿಯಾಗಿದ್ದವು. ಈಗಲೂ ಅವುಗಳಲ್ಲಿ ಹನಿ ನೀರು ಇಲ್ಲದಂತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಗೆ ಒಳಪಟ್ಟ ಒಟ್ಟು 320 ಕೆರೆಗಳು ಇವೆ. 320 ಕೆರೆಗಳು ಪೈಕಿ 200 ಕೆರೆಗಳು ಸಂಪೂರ್ಣ ಖಾಲಿ ಖಾಲಿಯಾಗಿವೆ. 72 ಕೆರೆಗಳಲ್ಲಿ ಶೇ. 30 ರಷ್ಟು ಮಾತ್ರ ನೀರು ಇದೆ (belagavi, ballari).
ರಣ ಬಿಸಿಲಿನ ಬಳ್ಳಾರಿ ಜಿಲ್ಲೆಯಲ್ಲಿ ಪರಿಸ್ಥಿತಿ ಈಗಲೂ ಕೆಟ್ಟಾಗಿದೆ. ರಣ ಬಿಸಿಲು ಖ್ಯಾತಿಯ ಬಳ್ಳಾರಿಯಲ್ಲಿ ಮಳೆ ಕೊರೆತೆಯಾಗಿ ಕೆರೆಗಳು ಬತ್ತಿವೆ. ಕೆರೆಗಳು ಹನಿ ನೀರಿಲ್ಲದೆ ಒಣಗುತ್ತಿವೆ. ಬಳ್ಳಾರಿ ಜಿಲ್ಲೆಯಾದ್ಯಂತ 30 ಕ್ಕೂ ಹೆಚ್ಚು ಕೆರೆಗಳು ನೀರಿಲ್ಲದೆ ಬರಡು ಬರಡಾಗಿವೆ. ಜಿಲ್ಲೆಯಾದ್ಯಂತ 67 ಕೆರೆಗಳಿವೆ, ಅದರಲ್ಲಿ 30 ಕ್ಕೂ ಹೆಚ್ಚು ಕೆರೆಗಳಲ್ಲಿ ನೀರಿಲ್ಲವಾಗಿದೆ. ಬಳ್ಳಾರಿಯಲ್ಲಿ ಅಂತರ್ಜಲ ಕುಸಿತ ಕಂಡಿದೆ.