Heavy rain in yadgir | ಶಾಲಾ ಕಟ್ಟಡ ಸೋರಿಕೆ : ಆತಂಕದಲ್ಲಿ ಮಕ್ಕಳು
ಯಾದಗಿರಿ : ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಮಳೆಯಾಗುತ್ತಿದೆ.
ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಜನರು ಬದುಕು ಬರ್ಬಾದ್ ಆಗಿದೆ.
ಈ ನಡುವೆ ರೈತರು ಕೂಡ ಬೆಳೆ ಕಳೆದುಕೊಂಡು ಆತಂಕದಲ್ಲಿದ್ದಾರೆ.
ಇತ್ತ ಮಳೆರಾಯನ ಆರ್ಭಟಕ್ಕೆ ಶಾಲಾ ಮಕ್ಕಳು ಕೂಡ ಪರದಾಡುವ ಸ್ಥಿತಿಗೆ ಬಂದಿದೆ.

ನಿರಂತರ ಮಳೆಯಿಂದಾಗಿ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕದರಾಪುರ ಗ್ರಾಮದಲ್ಲಿ ವಿದ್ಯಾರ್ಥಿಗಳ ಸಂಕಷ್ಟಕ್ಕೀಡಾಗಿದ್ದಾರೆ.
ಭಾರಿ ವರ್ಷಧಾರೆಯಿಂದಾಗಿ ಕದರಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಕಟ್ಟಡ ಸೋರುತ್ತಿದೆ.
ಇದರಿಂದಾಗಿ ಮಕ್ಕಳಿಗೆ ಶಾಲಾ ಆವರಣದಲ್ಲಿ ತರಗತಿಗಳು ನಡೆಯುತ್ತಿವೆ.
ಒಂದೇ ಕೊಣೆಯಲ್ಲಿ 1 ರಿಂದ 5 ತರಗತಿ ನಡೆಸಲಾಗುತಿತ್ತು.
ಶಾಲೆ ಕೊಣೆ ಸೋರಿಕೆಯಿಂದಾಗಿ ಬಯಲು ಪ್ರದೇಶದಲ್ಲಿ ಮಕ್ಕಳಿಗೆ ಪಾಠ ಮಾಡುವುದು ಅನಿವಾರ್ಯವಾಗಿದೆ.
ಹೀಗಾಗಿ ನೂತನ ಕಟ್ಟಡ ನಿರ್ಮಾಣ ಮಾಡಿಕೊಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.