ರಾಜ್ಯದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಬಿಟ್ಟು ಬಿಡದೆ ಆಗಾಗ ಮಳೆ ಸುರಿಯಬುದು ಎಂಬ ಮುನ್ಸೂಚನೆ ಸಿಕ್ಕಿದೆ. ಇನ್ನೂ ಈಗಾಗಲೇ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಇನ್ನೂ 2 ದಿನಗಳ ಕಾಲ ಮಳೆ ಮುಂದುವರೆಯುವುದಾಗಿ ಹವಾಮಾನ ಇಲಾಖೆ ವರದಿ ಮಾಡಿದೆ. ಸಮುದ್ರದಲ್ಲಿ ಗಾಳಿಯ ಅಬ್ಬರ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಿಕ್ಕಮಗಳೂರು ಜಿಲ್ಲೆಯ ಕೆಲವು ಭಾಗಗಳಲ್ಲಿಯೂ
ಸಾಧಾರಣ ಮಳೆಯಾಗುವುದಾಗಿ ವರದಿ ಮಾಡಿದೆ. ಒಂದೆಡೆ ಉತ್ತಮ ಮಳೆಯಿಂದಾಗಿ ರೈತರಿಗೆ ಸಂತಸ ಉಂಟಾದ್ರೆ ಮತ್ತೊಂದೆಡೆ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಳ್ಳುವ ಆತಂಕವೂ ಇದೆ. ಅಲ್ಲದೇ ಮೊದಲೇ ಕೊರೊನಾ ಹಾವಳಿಯಿಂದ ತ್ತರಿಸಿರುವ ರಾಜ್ಯದಲ್ಲಿ ಮಳೆಯಿಂದಾಗಿ ವೈರಸ್ ಮತ್ತಷ್ಟು ವೇಗವಾಗಿ ಹರಡಬಹುದಾದ ಆತಂಕವೂ ಇದೆ.
ಶ್ರೀ ಲಕ್ಷ್ಮೀದೇವಿ ದೇವಸ್ಥಾನ ಮಳಲಿ, ಹಾಸನ ಇತಿಹಾಸ ಮತ್ತು ಮಹಿಮೆ
ಕರ್ನಾಟಕದ ಹಾಸನ ಜಿಲ್ಲೆಯ ಮಳಲಿ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀದೇವಿ ದೇವಸ್ಥಾನವು ತನ್ನ ಐತಿಹಾಸಿಕ ಹಿನ್ನಲೆ, ವಾಸ್ತುಶಿಲ್ಪದ ಸೌಂದರ್ಯ ಮತ್ತು ಭಕ್ತರ ಪಾಲಿನ ಶ್ರದ್ಧಾ ಕೇಂದ್ರವಾಗಿ ಮಹತ್ವ ಪಡೆದಿದೆ....