Heavy Rain | ತುಂಗಭದ್ರಾ ಡ್ಯಾಂನಿಂದ ನೀರು ರಿಲೀಸ್ : ಹಲವು ಸೇತುವೆಗಳು ಜಲಾವೃತ
ಕೊಪ್ಪಳ : ರಾಜ್ಯದಾದ್ಯಂತ ಮಳೆರಾಯ ಆರ್ಭಟ ಮುಂದುವರೆದಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಎಲ್ಲಾ ಜಲಾಶಯಗಳು ತುಂಬಿ ಹರಿಯುತ್ತಿವೆ.
ಅದರಂತೆ ತುಂಗಭದ್ರ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಬಂದು ಸೇರುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಡ್ಯಾಂನಿಂದ ನೀರು ಹೊರ ಹರಿಸಲಾಗುತ್ತಿದೆ.
ಇದರಿಂದ ನದಿಪಾತ್ರದ ಜನರಲ್ಲಿ ಪ್ರವಾಹದ ಆತಂಕ ಮನೆ ಮಾಡಿದೆ.

ಈ ನಡುವೆ ತುಂಗಭದ್ರಾ ಜಲಾಶಯದಿಂದ 1,70,511 ಕ್ಯುಸೆಕ್ ನೀರನ್ನ ಹೊರ ಹರಿಸಲಾಗಿದೆ.
ಇದರಿಂದ ಕಂಪ್ಲಿ– ಗಂಗಾವತಿ ಸೇತುವೆ ಜಲಾವೃತಗೊಂಡಿದೆ.
ಹೀಗಾಗಿ ಸೇತುವೆ ಮೇಲಿನ ಸಂಚಾರಕ್ಕೆ ಅಧಿಕಾರಿಗಳು ನಿರ್ಬಂಧ ಹೇರಿದ್ದಾರೆ.
ಇದರ ಜೊತೆಗೆ ಪಂಪಾಪತಿ ದೇವಸ್ಥಾನದ ಹಿಂಭಾಗದ ಮಾಗಾಣಿ ರಸ್ತೆಸೇತುವೆ ಸಹಿತ ಜಲಾವೃತಗೊಂಡಿದೆ.
ಮತ್ತೊಂದು ಕಡೆ ಕೋಟೆಯ ಮೀನುಗಾರ ಕಾಲೋನಿಗೆ ನೀರು ನುಗ್ಗಿದೆ.
ಅಲ್ಲದೆ ಭಾರಿ ಪ್ರಮಾಣದ ನೀರು ಹೊರ ಹರಿಸಿರುವುದರಿಂದ ಐತಿಹಾಸಿಕ ಕೋಟೆ ಆಂಜಿನೇಯ ದೇವಸ್ಥಾನದ ಗರ್ಭಗುಡಿಗೆ ನೀರು ನುಗ್ಗಿದೆ.