Heavy Rain | ಬೀದರ್ ನಲ್ಲಿ ಭಾರಿ ಮಳೆ : ನಗರ ವಾಸಿಗಳು ತತ್ತರ
ಬೀದರ್ : ಗಡಿ ಜಿಲ್ಲೆ, ಕೋಟೆನಗರಿ ಬೀದರ್ ನಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ನಿರಂತರ ಮಳೆಯಿಂದಾಗಿ ಬೀದರ್ ನಲ್ಲಿ ನಾನಾ ಅವಾಂತರಗಳು ಸೃಷ್ಟಿಯಾಗಿವೆ.
ಬೀದರ ನಲ್ಲಿ ಮಳೆ ಅಬ್ಬರಕ್ಜೆ ನಗರ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.
ನಗರದಲ್ಲಿ ಸುರಿದ ಧಾರಕಾರ ಮಳೆಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಸಂಪುರ್ಣ ಜಲಾ ವೃತಗೊಂಡಿವೆ.
ನಗರದ ಹಲವು ರಸ್ತೆ ಕೆರೆಯಂತೆ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ನೀರಿನಲ್ಲಿಯೇ ವಿದ್ಯಾರ್ಥಿಗಳು ನಡೆದುಕೊಂಡು ಹೋಗಿ ಶಾಲೆ ಸೇರುತ್ತಿದ್ದಾರೆ.
ಇತ್ತ ನಗರದ ನಂದಿ ಬಡಾವಣೆಯಲ್ಲಿ ಜಿಲ್ಲಾ ಜೆಡಿಎಸ್ ಕಚೇರಿ ಆವರಣ ಸಂಪೂರ್ಣ ಜಲಾವೃತಗೊಂಡಿವೆ. Heavy rains in Bidar City residents panic