ಬಿಸಿಲಿನ ತಾಪಮಾನಕ್ಕೆ ಹೈರಾಣಾದ ಬೀದರ್ ಮಂದಿ
ಬೀದರ: ರಾಜ್ಯದಲ್ಲಿ ಜನರು ಬಿಸಲಿನ ತಾಪಕ್ಕೆ ಸುಸ್ತಾಗಿದ್ದು, ಮಧ್ಯಾಹ್ನದ ಹೊತ್ತಿಗೆ ಮನೆಯಿಂದ ಹೊರ ಬರುವುದಕ್ಕೂ ಹಿಂಜರಿಯುತ್ತಿದ್ದಾರೆ.
ರಾಜ್ಯದ ಬೀದರ ಜಿಲ್ಲೆಯಲ್ಲಿ ಪ್ರತಿನಿತ್ಯ ಸರಾಸರಿ 40 ರಿಂದ 44 ಡಿಗ್ರಿ ತಾಪಮಾನ ದಾಖಲಾಗುತ್ತಿದ್ದು, ಜನರು ಬಿಸಿಲಿನ ಬೇಗೆಗೆ ಹೈರಾಣಾಗುತ್ತಿದ್ದಾರೆ. ಬಿಸಿಲಿನಿಂದ ರಕ್ಷಣೆ ಪಡೆಯಲು ಯುವಕರು ಬಾವಿ ಹಾಗೂ ನದಿಗಳತ್ತ ಹೋಗಿ ಈಜಾಡುವ ಮೂಲಕ ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಲಿನ ಝಳ ಹೆಚ್ಚುತ್ತಿದ್ದು ತಾಪಮಾನದಲ್ಲಾದ ಏರಿಕೆಗೆ ಜನರು ರೋಸಿ ಹೋಗಿದ್ದು, ದೇಹವನ್ನು ತಂಪು ಮಾಡಿಕೊಳ್ಳಲು ತಂಪು ಪಾನೀಯ ಹಾಗೂ ಕಲ್ಲಂಗಡಿ, ಮಜ್ಜಿಗೆಗಳ ಮೊರೆ ಹೋಗುತ್ತಿದ್ದಾರೆ.
ಇನ್ನೂ ಬೇಸಿಗೆಯಲ್ಲಿ ಸರಾಸರಿ ಹೆಚ್ಚಿನ ತಾಪಮಾನವು ರಾಜ್ಯದಾದ್ಯಂತ 34 ಡಿಗ್ರಿ ಸೆಲ್ಸಿಯಸ್ ಆಗಿದೆ. ಮಳೆಗಾಲದಲ್ಲಿ ದಿನದ ಸರಾಸರಿ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಚಳಿಗಾಲದಲ್ಲಿ ತಾಪಮಾನವು 32 ಡಿಗ್ರಿ ಸೆಲ್ಸಿಯಸ್‌ನಿಂದ 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ.
ಇಲ್ಲಿಯವರೆಗೆ ಕರ್ನಾಟಕದಲ್ಲಿ ದಾಖಲಾದ ಅತ್ಯಧಿಕ ತಾಪಮಾನವು ರಾಯಚೂರಿನಲ್ಲಿ 45.6 °C (114 °F) 1928 ರ ಮೇ 23 ರಂದು ದಾಖಲಾಗಿದೆ. 1918 ರ ಡಿಸೆಂಬರ್ 16 ರಂದು ಬೀದರ್‌ನಲ್ಲಿ ದಾಖಲಾದ ಕಡಿಮೆ ತಾಪಮಾನವು 2.8 °C (37 °F) C ಆಗಿತ್ತು.