ಅಗ್ನಿಪಥ್ ಪ್ರತಿಭಟನೆಯ ಬಿಸಿ – ದೆಹಲಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್….
ರಕ್ಷಣಾ ಪಡೆಗಳ ನೂತನ ನೇಮಕಾತಿ ಯೋಜನೆ ಅಗ್ನಿಪಥ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯ ಗಡಿಯಲ್ಲಿ ಪೊಲೀಸರು ವ್ಯಾಪಕ ತಪಾಸಣೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
https://twitter.com/ANI/status/1538744996265742336
ಅಗ್ನಿಪಥ ಯೋಜನೆ ವಿರೋಧಿಸಿ ಹಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯಗಳು ಬಿಗಿ ಭದ್ರತೆ ಕೈಗೊಂಡಿವೆ. ಪೊಲೀಸ್ ತಪಾಸಣೆಯ ಭಾಗವಾಗಿ, ದೆಹಲಿ-ಗುರುಗ್ರಾಮ್ ಮತ್ತು ದೆಹಲಿ-ನೋಯ್ಡಾ ಹೆದ್ದಾರಿಗಳಲ್ಲಿ ಹಲವಾರು ವಾಹನಗಳನ್ನು ನಿಲ್ಲಿಸಲಾಯಿತು. ತಪಾಸಣೆಯ ನಂತರವೇ ವಾಹನಗಳನ್ನು ದೆಹಲಿಯೊಳಗೆ ಬಿಡಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿರುವುದರಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Youth Congress’ continuously protest at railway stations in Delhi against #AgnipathScheme pic.twitter.com/NMpBGW85S2
— Supriya Bhardwaj (@Supriya23bh) June 20, 2022
ಹೆದ್ದಾರಿಗಳಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿರುವ ಸಾವಿರಾರು ವಾಹನಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕಾಂಗ್ರೆಸ್ ಪ್ರತಿಭಟನೆಯುದ್ದಕ್ಕೂ ಜಂತರ್ ಮಂತರ್ ಬಳಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಐಸಿಸಿ ಕಚೇರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರನ್ನು ಎಐಸಿಸಿ ಕಚೇರಿಗೆ ಬಿಡದ ಕಾರಣ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.








