ಅತ್ತೆ ಮನೆಗೆ ರಾಯಲ್ ಆಗಿ ಹೆಲಿಕಾಪ್ಟರ್ ಮೂಲಕ ಎಂಟ್ರಿ ಕೊಟ್ಟ ವಧು : ವಿಡಿಯೋ
ರಾಜಸ್ಥಾನ : ಸಾಮಾನ್ಯವಾಗಿ ಮದುವೆಯಾದ ನಂತರ ನವ ಜೋಡಿ ಕಾರಲ್ಲಿ , ಬರೋದನ್ನ ನಾವೆಲ್ಲರೂ ನೋಡಿರುತ್ತೇವೆ.. ಆದ್ರೆ ಇಲ್ಲೊಬ್ಬ ವಧು ಹೆಲಿಕಾಪ್ಟರ್ ಮೂಲಕವೇ ತನ್ನ ಗಂಡನ ಮನೆಗೆ ಎಂಟ್ರಿಕೊಟ್ಟಿರುವ ಘಟನೆ ನಡೆದಿದೆ.. ಹೊಸದಾಗಿ ಮದುವೆಯಾದ ಮಧುಮಗಳು ತನ್ನ ಪತಿ ಜೊತೆಗೆ ಹೆಲಿಕಾಪ್ಟರ್ ನಲ್ಲಿ ಬಂದು ಲ್ಯಾಂಡ್ ಆಗಿದ್ದಾರೆ.. ರಾಜಸ್ಥಾನದ ಬಾರ್ಮರ್ ನಲ್ಲಿ ಈ ಘಟನೆ ನಡೆದಿದ್ದು, ಈ ಸಂಬಂಧಿತ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ..
ಬಾರ್ಮರ್ ಜಿಲ್ಲೆಯ ದಲಿತ ಕುಟುಂಬವೊಂದು ತಮ್ಮ ಸೊಸೆಯನ್ನು ಮೊದಲ ಬಾರಿಗೆ ಮನೆಗೆ ಕರೆತರಲು ಖಾಸಗಿ ಹೆಲಿಕಾಪ್ಟರ್ ಅನ್ನು ಬಾಡಿಗೆಗೆ ಪಡೆದಿದೆ. ಡಿಸೆಂಬರ್ 14 ರಂದು ಬಾರ್ಮರ್ ಜಿಲ್ಲೆಯ ಗಡಿಯ ಸಮೀಪವಿರುವ ಬಿಧಾನಿಯನ್ ಕಿ ಧನಿಯಲ್ಲಿ ಧಿಯಾ ಅವರನ್ನು ತರುಣ್ ಮೇಘವಾಲ್ ವಿವಾಹವಾದರು. ಮರುದಿನ ನವ ದಂಪತಿ ಹೆಲಿಕಾಪ್ಟರ್‍ನಲ್ಲಿ ಬಾರ್ಮರ್ ನಗರದ ಜಸೇಧರ್ ಧಾಮ್‍ಗೆ ತೆರಳಿದ್ದಾರೆ. ಇದನ್ನು ಕಂಡು ಗ್ರಾಮದ ಜನರು ಆಶ್ಚರ್ಯಕ್ಕೊಳಗಾಗಿದ್ದು, ಈ ದೃಶ್ಯ ನೋಡಲು ಜನ ಜಮಾವಣೆಗೊಂಡಿದ್ದರು. ಈ ವೇಳೆ ಜನರನ್ನು ನಿಯಂತ್ರಿಸಲು ಪೊಲೀಸರನ್ನು ಕರೆಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಮದುವೆ ಸಮಾರಂಭದ ವೇಳೆ ದಲಿತ ವರರು ಕುದುರೆ ಸವಾರಿ ಮಾಡಿದರೆ ಥಳಿಸುವುದಾಗಿ ಬೆದರಿಕೆಯೊಡ್ಡಿದ್ದರಿಂದ ಈ ಕುಟುಂಬ ವಿಶೇಷವಾಗಿ ಆಲೋಚಿಸಿ ಹೆಲಿಕಾಪ್ಟರ್ ನನ್ನೇ ಬಾಡಿಗೆ ಪಡೆದು ವಧುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಸೊಸೆಯನ್ನು ಹೆಲಿಕಾಪ್ಟರ್ ಮೂಲಕ ಬರಮಾಡಿಕೊಳ್ಳಬೇಕು ಎಂಬ ಕನಸ್ಸುನ್ನು ಹೊಂದಿದ್ದ ಅತ್ತೆ 1ಲಕ್ಷ ರೂ. ಹೆಲಿಕಾಪ್ಟರ್ ಬುಕ್ ಮಾಡಿ ಸೊಸೆಯನ್ನು ಮನೆಗೆ ಸ್ವಾಗತಿಸಿದ್ದಾರೆ.