ಎಲ್ಲರೂ ಚಿತ್ರರಂಗದವರಿಗೆ ಸಹಾಯ ಮಾಡಿ : ಅಶ್ವಥ್ ನಾರಾಯಣ
ಬೆಂಗಳೂರು : ಚಿತ್ರರಂಗದವರ ಸಮಸ್ಯೆ ಬಹು ಕಾಲದಿಂದ ಇದೆ. ಎಲ್ಲರೂ ಚಿತ್ರರಂಗದವರಿಗೆ ಸಹಾಯ ಮಾಡಿ ಎಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮನವಿ ಮಾಡಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರರಂಗದವರ ಸಮಸ್ಯೆ ಬಹು ಕಾಲದಿಂದ ಇದೆ. ಎಲ್ಲರೂ ಚಿತ್ರರಂಗದವರಿಗೆ ಸಹಾಯ ಮಾಡಬೇಕು.
ಸಿಎಂ ಗೃಹ ನಿರ್ಮಾಣ ಯೋಜನೆಯಡಿ ಕಲಾವಿದರು ಅರ್ಜಿ ಹಾಕಲಿ, ಕಲಾವಿದರಿಗೆ ಮನೆ ಕೋಡಿಸುವ ಕೆಲಸ ಮಾಡ್ತೇವೆ.
ಸರ್ಕಾರದಿಂದ ಸಬ್ಸಿಡಿ ಕೊಡ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಭರವಸೆ ನೀಡಿದರು.
ಇನ್ನು ಚಿತ್ರರಂಗದ ಕಲಾವಿದರಿಗೆ ಸಾಕಷ್ಟು ಸಮಸ್ಯೆಗಳಿವೆ. ಚಿತ್ರ ನಿರ್ಮಾಣದಲ್ಲೂ ಹಲವು ಸಮಸ್ಯೆಗಳಿವೆ.
ಚಿತ್ರರಂಗ ಹಾಗೂ ಕಲಾವಿದರಿಗೆ ಸಮಾಜದ ಹಲವು ಗಣ್ಯರು ಸಹಾಯ ಮಾಡಬೇಕು.
ಭರತ್ ಗೌಡ ಚಾರಿಟೇಬಲ್ ಟ್ರಸ್ಟ್ ನಿಂದ ಆಹಾರ ಕಿಟ್ ವಿತರಿಸಲಾಗುತ್ತಿದೆ.
ಸಿಎಂ ಜೊತೆ ಮಾತನಾಡಿ ಲಸಿಕೆ ಕೊಡಲು ನಿರ್ಧಾರ ಮಾಡ್ತೇವೆ ಎಂದು ತಿಳಿಸಿದರು.