ಚಳಿಗಾಲದಲ್ಲಿ ಅನೇಕರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸಲು ಮನೆಮದ್ದುಗಳು ಅತ್ಯಂತ ಪರಿಣಾಮಕಾರಿಯಾಗಿವೆ.ಕೆಲವು ಮನೆಮದ್ದುಗಳು ಇಲ್ಲಿವೆ
ಮನೆಮದ್ದುಗಳು:
1.ಶುಂಠಿ ಮತ್ತು ಜೇನುತುಪ್ಪ ಚಹಾ:
– ಶುಂಠಿ ಮತ್ತು ಜೇನುತುಪ್ಪವನ್ನು ಸೇರಿಸಿ ತಯಾರಿಸಿದ ಚಹಾ ಕುಡಿಯುವುದರಿಂದ ಕೆಮ್ಮು ಮತ್ತು ಶೀತ ನಿವಾರಣೆಯಾಗುತ್ತದೆ.
– ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಈ ಮಿಶ್ರಣವು ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದೆ.
2. ತುಳಸಿ ಮಿಶ್ರಣ:
– ನೀರಿಗೆ 7-8 ತುಳಸಿ ಎಲೆಗಳು, ಒಂದು ಸಣ್ಣ ತುಂಡು ಶುಂಠಿ, ಬೆಳ್ಳುಳ್ಳಿ ತುಂಡುಗಳು, ಜೀರಿಗೆ, ಅರಿಶಿನ, ಮೆಂತ್ಯ ಮತ್ತು ಕಾಳುಮೆಣಸು ಸೇರಿಸಿ ಕುದಿಸಿ. ಪ್ರತಿದಿನ ಬೆಳಿಗ್ಗೆ ಈ ಮಿಶ್ರಣವನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
3. ಅರಿಶಿನ ಮತ್ತು ಜೇನುತುಪ್ಪ:
– ಸ್ವಲ್ಪ ಅರಿಶಿನ, ಕಾಳುಮೆಣಸು ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಸೇವಿಸಬಹುದು. ಇದು ಗಂಟಲು ನೋವು ನಿವಾರಣೆಗೆ ಸಹಾಯ ಮಾಡುತ್ತದೆ.
4. ಹಣ್ಣುಗಳು:
– ಆಮ್ಲಾ, ಅನಾನಸ್, ನಿಂಬೆ, ಕಿವಿ ಮುಂತಾದ ಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಕೆಮ್ಮು ಮತ್ತು ಶೀತ ಕಡಿಮೆ ಮಾಡಲು ಸಾಧ್ಯವಾಗುತ್ತದೆ.
ಸಲಹೆಗಳು:
– ಕರಿದ ಆಹಾರಗಳು, ಹೊರಗಿನ ಆಹಾರ ಮತ್ತು ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳ ಬಳಕೆ ಕಡಿಮೆ ಮಾಡಬೇಕು.
– ಮನೆಯಲ್ಲಿ ಬೇಯಿಸಿದ ಆಹಾರ ಸೇವನೆಗೆ ಆದ್ಯತೆ ನೀಡಬೇಕು.
ಸೂಚನೆ:
ಈ ಮನೆಮದ್ದುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಉತ್ತಮ.