ಬೆಂಗಳೂರು: ರಾಜ್ಯದ ಹಲವೆಡೆ ಈಗಾಗಲೇ ಮಳೆರಾಯ ಅಬ್ಬರಿಸುತ್ತಿದ್ದಾನೆ. ಬೆಂಗಳೂರಿನಲ್ಲಿ ಕೂಡ ಮಳೆಯಾಗುತ್ತಿದ್ದು, ಬೆಂಗಳೂರಿನಲ್ಲಿ 3 ದಿನ ಮಳೆರಾಯ ಬ್ರೇಕ್ ಪಡೆಯುತ್ತಿದ್ದಾನೆ.
ಇಂದಿನಿಂದ ಮೇ 30ರವರೆಗೆ ಬೆಂಗಳೂರು ಸೇರಿದಂತೆ ದಕ್ಷಿಣ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆರಾಯ ಮೂರು ದಿನ ಬ್ರೇಕ್ ತೆಗೆದುಕೊಳ್ಳಲಿದ್ದಾನೆ ಯೆನ್ನಲಾಗಿದೆ. ಇನ್ನೊಂದೆಡೆ ಕರಾವಳಿ ಭಾಗದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಮುನ್ಸೂಚನೆ ಇದೆ.
ಈ ಬಾರಿ ಮೇ 31 ಅಥವಾ ಜೂನ್ 1ರ ಅವಧಿಯಲ್ಲಿ ಕೇರಳಕ್ಕೆ (Kerala) ಮುಂಗಾರು ಪ್ರವೇಶ ಮಾಡಲಿದೆ. ಜೂನ್1 ರ ಬಳಿಕ ಕರಾವಳಿ ಮತ್ತು ದಕ್ಷಿಣ ಒಳನಾಡು ಪ್ರದೇಶಗಳಿಗೆ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಈ ಭಾರೀ ಉತ್ತಮ ಮುಂಗಾರಿನ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಈಗಾಗಲೇ ಸೈಕ್ಲೋನ್ ದೇಶಕ್ಕೆ ಎಂಟ್ರಿಯಾಗಿದೆ. ಬಾಂಗ್ಲಾದೇಶ ಕರಾವಳಿ ಪ್ರವೇಶಿಸಿದ್ದ ರೆಮಲ್ ಚಂಡಮಾರುತ, ತಡರಾತ್ರಿ ಪಶ್ಚಿಮ ಬಂಗಾಳಕ್ಕೆ ಎಂಟ್ರಿಕೊಟ್ಟಿದೆ. 135 ಕಿ.ಮೀ ವೇಗದಲ್ಲಿ ಪ್ರವೇಶಸಿರುವ ಚಂಡಮಾರುತ ಭಾರೀ ಅಬ್ಬರಿಸುವ ಸಾಧ್ಯತೆ ಇದೆ. ಇನ್ನೇನು ರಾಜ್ಯಕ್ಕೆ ಕೆಲವೇ ದಿನಗಳಲ್ಲಿ ಮುಂಗಾರು ಪ್ರವೇಶ ಮಾಡಲಿದೆ.