ADVERTISEMENT
Wednesday, August 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

Draupadi Murmu – ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನದ ಸಂಪೂರ್ಣ ಅಪ್ಡೇಟ್ ಇಲ್ಲಿದೆ…. 

Naveen Kumar B C by Naveen Kumar B C
July 25, 2022
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನದ ಸಂಪೂರ್ಣ ಅಪ್ಡೇಟ್ ಇಲ್ಲಿದೆ….

ಸಾಮಾನ್ಯ ಬುಡಕಟ್ಟು ಜನಾಂಗದ ಮಹಿಳೆ ಭಾರತದ ಪ್ರಜಾಪ್ರಭುತ್ವದ  ಅಡಿಯಲ್ಲಿ ದೇಶದ  ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನ ಅಲಂಕರಿಸಬಹುದು ಎನ್ನುವುದಕ್ಕೆ ಭಾರತ ದೇಶ ಇಂದು ಸಾಕ್ಷಿಯಾಗಿದೆ.

Related posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

August 11, 2026
varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

August 11, 2026

ಒಡಿಶಾ ಮೂಲದ  ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರು ದೇಶದ 15ನೇ ರಾಷ್ಟ್ರಪತಿಯಾಗಿ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರಿಂದ  ಪ್ರಮಾಣ ವಚನ ಸ್ವೀಕರಿಸಿದ್ದಾರೆ. ದ್ರೌಪದಿ ಮುರ್ಮು  ಇಂದು  ಬೆಳಗ್ಗೆ 10.15ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲ್ ತಲುಪಿ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಇದಕ್ಕೂ ಮುನ್ನ  ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನ ತಲುಪಿ,  ಅಲ್ಲಿ ರಾಮ್ ನಾಥ್ ಕೋವಿಂದ್ ಮತ್ತು ಅವರ ಪತ್ನಿಯನ್ನು ಭೇಟಿಗಿದ್ದರು. ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನ ಅವರು ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ನಮನ ಸಲ್ಲಿಸಿದ್ದರು.

ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವತಂತ್ರ ಭಾರತದಲ್ಲಿ ಜನಿಸಿದ ದೇಶದ ಮೊದಲ ರಾಷ್ಟ್ರಪತಿ ನಾನು. ಸ್ವತಂತ್ರ ಭಾರತದ ಬಗ್ಗೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಹೊಂದಿದ್ದ ನಿರೀಕ್ಷೆಗಳನ್ನು ಪೂರೈಸಲು ನಾವು ಇನ್ನಷ್ಟು ಪ್ರಯತ್ನಗಳನ್ನ ಪಡಬೇಕಿದೆ.

“ನಾನು ಬಂದ ಸ್ಥಳ, ಪ್ರಾಥಮಿಕ ಶಿಕ್ಷಣ ಒಂದು ಕನಸು. ದೇಶದ ವಂಚಿತರು, ಬಡವರು, ದಲಿತರು ಮತ್ತು ಬುಡಕಟ್ಟು ಜನರ ಪ್ರತಿಬಿಂಬವವಾಗಿ  ನಾನಿಲ್ಲಿ  ನಿಂತಿದ್ದೇನೆ.  ನಾನು ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿದ್ದರ ಹಿಂದೆ ಬಡವರ ಆಶೀರ್ವಾದವಿದೆ. ಕೋಟಿಗಟ್ಟಲೆ ಮಹಿಳೆಯರ ಕನಸುಗಳು ಮತ್ತು ಸಾಮರ್ಥ್ಯಗಳ ಪ್ರತಿಬಿಂಬವಾಗಿ ನಾನು ಈ ಹುದ್ದೆಗೆ ಏರಿದ್ದೇನೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ ಹುದ್ದೆ ತಲುಪಿದ್ದು ನನ್ನ ವೈಯಕ್ತಿಕ ಸಾಧನೆಯಲ್ಲ, ಇದು ಭಾರತದ ಪ್ರತಿಯೊಬ್ಬ ಬಡವರ ಸಾಧನೆ. ನನ್ನ ನಾಮನಿರ್ದೇಶನವು ಭಾರತದಲ್ಲಿನ ಬಡವರು ಕನಸುಗಳನ್ನು ಮಾತ್ರವಲ್ಲದೆ ಆ ಕನಸುಗಳನ್ನು ನನಸಾಗಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಸಂಸತ್ತಿನಲ್ಲಿ ನನ್ನ ಉಪಸ್ಥಿತಿಯು ಭಾರತೀಯರ ಭರವಸೆ ಮತ್ತು ಹಕ್ಕುಗಳ ಸಂಕೇತವಾಗಿದೆ. ಎಲ್ಲರಿಗೂ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನಿಮ್ಮ ನಂಬಿಕೆ ಮತ್ತು ಬೆಂಬಲ ನನಗೆ ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಶಕ್ತಿಯನ್ನು ನೀಡುತ್ತಿದೆ ಎಂದು ಭಾಷಣದಲ್ಲಿ ತಿಳಿಸಿದರು.

ಪ್ರಮಾಣ ವಚನ ಸಮಾರಂಭದಲ್ಲಿ ಉಪ ರಾಷ್ಟ್ರಪತಿ ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಮತ್ತು ಮಂತ್ರಿಮಂಡಲದ ಸದಸ್ಯರು, ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳು, ಸಂಸತ್ತಿನ ಸದಸ್ಯರು ಮತ್ತು ಭಾರತ ಸರ್ಕಾರದ ಪ್ರಧಾನ ಸಿವಿಲ್ ಮತ್ತು ಮಿಲಿಟರಿ ಅಧಿಕಾರಿಗಳು ಭಾಗವಹಿಸಿದ್ದರು.

ಮುರ್ಮು ಅವರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಒಡಿಶಾದಿಂದ 64 ವಿಶೇಷ ಅತಿಥಿಗಳು ಆಗಮಿಸಿದ್ದರು. ಪ್ರಮಾಣ ವಚನದ ನಂತರ ರಾಷ್ಟ್ರಪತಿ ಭವನದಲ್ಲಿ  ಅವರಿಗಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಸಮಾರಂಭದ ಮುಕ್ತಾಯದ ನಂತರ, ರಾಷ್ಟ್ರಪತಿ ಮುರ್ಮು ಅವರು ರಾಷ್ಟ್ರಪತಿ ಭವನಕ್ಕೆ ತೆರಳಿದರು, ಅಲ್ಲಿ ಅವರಿಗೆ ಫೋರ್ಕೋರ್ಟ್‌ನಲ್ಲಿ ಇಂಟರ್-ಸರ್ವಿಸ್ ಗಾರ್ಡ್ ಆಫ್ ಆನರ್ ನೀಡಲಾಯಿತು ಮತ್ತು ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಗೌರವ ಸಲ್ಲಿಸಲಾಯಿತು.

64 ವರ್ಷದ ದ್ರೌಪದಿ ಮುರ್ಮು ಅವರು ದೇಶದ ಅತ್ಯಂತ ಕಿರಿಯ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.  ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ರಾಷ್ಟ್ರಪತಿ ಕೂಡ.

Tags: Draupadi Murmupresident
ShareTweetSendShare
Join us on:

Related Posts

slum-dog-movie-glimpse-tabu-gauri-hegde-vijay-sethupathi-puri-jagannadh

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ ‘ಸ್ಲಮ್ ಡಾಗ್’ ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್;

by admin
August 11, 2026
0

ವಿಜಯ್ ಸೇತುಪತಿ ಮತ್ತು ಪೂರಿ ಜಗನ್ನಾಥ್ ಅವರ ಬಹುನಿರೀಕ್ಷಿತ ಆಕ್ಷನ್-ಡ್ರಾಮಾ 'ಸ್ಲಮ್ ಡಾಗ್' ಚಿತ್ರದ ಹೊಸ ಗ್ಲಿಂಪ್ಸ್ ರಿಲೀಸ್; ‌ಪವರ್‌ಫುಲ್ ಅಧಿಕಾರಿ 'ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು!...

varamahalakshmi-vrata-ashtalakshmi-coin-remedy-for-wealth

ವರಮಹಾಲಕ್ಷ್ಮಿ ವ್ರತದ ದಿನದಂದು ಎಂಟು ಒಂದು ರೂಪಾಯಿ ನಾಣ್ಯಗಳನ್ನು ಇಟ್ಟು ಅಷ್ಟಲಕ್ಷ್ಮಿ ದೇವತೆಗಳ ಆಶೀರ್ವಾದವನ್ನು ಪಡೆಯುವ ಮೂಲಕ ಮಾಡಬಹುದಾದ ತಾಂತ್ರಿಕ ಪರಿಹಾರ.

by admin
August 11, 2026
0

ಅಷ್ಟ ಐಶ್ವರ್ಯ ಪಡೆಯಲು ತಾಂತ್ರಿಕ ಪರಿಹಾರ ಅಷ್ಟ ಲಕ್ಷ್ಮಿ ನಾಣ್ಯಗಳು ಶುಕ್ರವಾರ ಮಹಾಲಕ್ಷ್ಮಿ ದೇವಿಗೆ ಶುಭ ದಿನ. ಆ ಶುಕ್ರವಾರ ಬರುವ ಶುಕ್ರ ಹೊರೆಯ ಸಮಯದಲ್ಲಿ ನಾವು...

asthalakshmi-mantra-money-remedy-friday-astrology-tips

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ.

by admin
August 11, 2026
0

ಹಣ ಬರಮಾಡಿಕೊಳ್ಳುವ ಈ ಮಂತ್ರವನ್ನು 28-08-2026 ರಂದು 5 ಬಾರಿ ಪಠಿಸಿ. ಅದೃಷ್ಟದ ರಾಜಯೋಗದ ಹಣವು ನಿಮ್ಮ ಬಳಿ ಸೇರುತ್ತದೆ. 28-08-2026 ರಂದು ನಗದು ಅಗತ್ಯವನ್ನು ಪೂರೈಸಲು...

biscoff-swiggy-dineout-dm-a-lonely-cup-campaign-offers

by admin
August 11, 2026
0

ಒಂಟಿ ಕಾಫಿ ಕಪ್ ಫೋಟೋ ಕಳುಹಿಸಿ, ಆಕರ್ಷಕ ಗಿಫ್ಟ್ ಗೆಲ್ಲಿ: ಟೀ - ಕಾಫಿ ಪ್ರಿಯರಿಗಾಗಿ ವಿನೂತನ ಆಫರ್!  ಬೆಂಗಳೂರು: ಬಿಸಿ ಬಿಸಿ ಟೀ ಅಥವಾ ಕಾಫಿ...

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ:  ಸಂಘಟನೆಗಳ  ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

ಆಗಸ್ಟ್ 13ರ ಕಾವೇರಿ ಹೋರಾಟದ ಬಂದ್‌ಗೆ ವಿಘ್ನ: ಸಂಘಟನೆಗಳ ಒಡಕಿನಿಂದ ಅತಂತ್ರವಾಯ್ತು ಕಾವೇರಿ ಹೋರಾಟ

by Shwetha
August 11, 2026
0

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ವಿರೋಧಿಸಿ ಆಗಸ್ಟ್ 13ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಈಗ ಅನಿಶ್ಚಿತತೆಯ ಸುಳಿಗೆ ಸಿಲುಕಿದೆ. ರಾಜ್ಯದಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram