ಕಷ್ಟಗಳನ್ನೆಲ್ಲಾ ಮೆಟ್ಟಿ ರಿಲೀಸ್ ಆದ್ರೂ ‘ಹೀರೋ’ ಗೆ ಪೈರೆಸಿ ಹೊಡೆತ : ರಿಷಬ್ ಬೇಸರ..!

1 min read

ಕಷ್ಟಗಳನ್ನೆಲ್ಲಾ ಮೆಟ್ಟಿ ರಿಲೀಸ್ ಆದ್ರೂ ‘ಹೀರೋ’ ಗೆ ಪೈರೆಸಿ ಹೊಡೆತ : ರಿಷಬ್ ಬೇಸರ..!

ಕೊರೊನಾ ಹಾವಳಿ, ಶೂಟಿಂಗ್ ವೇಳೆ ಅಪಘಾತ ಹೀಗೆ ಎಲ್ಲಾ ಕಷ್ಟಗಳನ್ನ ಎದುರಿಸಿ ಕೊನೆಗೂ ಥಿಯೇಟರ್ ಗಳಲ್ಲಿ ರಿಲೀಸ್ ಆದ ‘ಹೀರೋ’ಗೆ ತಕ್ಕ ನ್ಯಾಯ ಸಿಕ್ಕಿಲ್ಲ. ಹೌದು ರಿಷಬ್ ಶೆಟ್ಟಿ ನಟಿಸಿ ನಿರ್ಮಾಣ ಮಾಡಿರುವ ‘ಹೀರೋ’ ಸಿನಿಮಾ ದ್ಯ ಪೈರೆಸಿ ಸುಳಿಯಲ್ಲಿ ಸಿಲುಕಿ ಒದ್ದಾಡ್ತಿದೆ. ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರಿಲೀಸ್ ಮಾಡಿರುವ ರಿಷಬ್ ಶೆಟ್ಟಿ ತೀವ್ರ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಆಕ್ರೋಶವನ್ನೂ ಸಹ ಹೊರಹಾಕಿದ್ದಾರೆ.

‘ಹೀರೋ’ ಸಿನಿಮಾ ಕಳೆದ ಸಿನಿ ಶುಕ್ರವಾರ ಬಿಡುಗಡೆಯಾಗಿತ್ತು. ಇಂಟರ್ ಸ್ಟಿಂಗ್ ಕಥಾಹಂದರ, ಚಿತ್ರಕಥೆ ಪ್ರೇಕ್ಷಕರಿಗೆ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿತ್ತು. ಇದೀಗ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ ಪೈರಸಿ ಹಾವಳಿಗೆ ಸಿಲುಕಿದ್ದು ಚಿತ್ರತಂಡದ ಬೇಸರ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ರಿಷಬ್ ಶೆಟ್ಟಿ ಅವರು , ಕೊರೊನಾ ಹಾವಳಿ, ಲಾಕ್ ಡೌನ್ ನಂತಹ ಸಮಯದಲ್ಲೂ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ಕಷ್ಟ ಪಟ್ಟು ಸಿನಿಮಾ ಮಾಡಿದ್ವಿ. ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ರೆಸ್ಪಾನ್ಸ್ ಕೂಡ ಪಡೆದುಕೊಂಡಿತ್ತು. ಆದರೆ ಇಂತಹ ಸಮಯದಲ್ಲಿ ಪೈರಸಿ ಎದುರಾಗಿದೆ. ಆ್ಯಂಟಿ ಪೈರಸಿ ತಂಡದ ಜೊತೆ ಕುಳಿತು ವೆಬ್‍ಸೈಟ್ ಗಳಿಂದ ಎಷ್ಟೇ ಪೈರಸಿ ಲಿಂಕ್ ಡಿಲೀಟ್ ಮಾಡಿಸುತ್ತಿದ್ರೂ, ಕೂಡ ಪೂರ್ತಿಯಾಗಿ ಲಿಂಕ್ಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನೋವು ಹಂಚಿಕೊಂಡಿದ್ದಾರೆ.

Bigg Boss 8 : ಮೊದಲ ವಾರವೇ ದೊಡ್ಮನೆಗೆ ವಿದಾಯ ಹೇಳಿದ ಧನುಶ್ರೀ..!

ಇದೇ ವೇಳೆ ಚಿತ್ರಮಂದಿರಗಳ ಮಾಲೀಕರ ಬಗ್ಗೆಯೂ ರಿಷಬ್ ಶೆಟ್ಟಿ ಅಸಮಾಧಾನ ಹೊರಹಾಕಿದ್ದು, ಚಿತ್ರಮಂದಿರಗಳಲ್ಲಿ ಕ್ಯಾಮೆರಾ, ಮೊಬೈಲ್ ತೆಗೆದುಕೊಂಡು ರೆಕಾರ್ಡ್ ಮಾಡೋದಕ್ಕೆ ಹೇಗೆ ಅನುವು ಮಾಡಿಕೊಡುತ್ತಾರೆ , ಪೈರಸಿ ವೆಬ್ಸೈಟ್ಗಳ ನಿಷೇಧ ಯಾಕೆ ಆಗ್ತಿಲ್ಲ ಎಂದು ಪ್ರಶ್ನೆ ಮಾಡಿ ಅಸಮಾದಾನ ಹೊರಹಾಕಿದ್ದಾರೆ. ಫಯರೆಸಿ ಅನ್ನೋ ಅಲೆ ದೊಡ್ಡದಾಗಿ ಬೆಳೆಯುತ್ತಲೇ ಹೋಗುತ್ತಿದ್ದು, ಚಿತ್ರೋದ್ಯಮಕ್ಕೆ ಮುಳುವಾಗ್ತಿದೆ. ಇದಕ್ಕೆ ಚಿತ್ರಮಂದಿರಗಳು ಹಾಗೂ ಸರ್ಕಾರವೂ ಕೂಡ ಸೂಕ್ತ ಕ್ರಮಕೈಗೊಳ್ಳಬೇಕಾಗಿದೆ. ಕೊರೊನಾ ಹೊಡೆತಕ್ಕೆ ನಲುಗಿಹೋಗಿರುವ ಚಿತ್ರೋದ್ಯಮ ಈಗ ನಿಧಾನಕ್ಕೆ ಚೇತರಿಕೆ ಕಾಣುತ್ತಿರುವ ಹೊತ್ತಲ್ಲಿ ಈ ರೀತಿ ಪೈರೆಸಿ ಆಗ್ತಿರುವುದು ಸಿನಿಮಾಗಳ ನಿರ್ಮಾಕರಿಗಷ್ಟೇ ಎಲ್ಲಾ ನಾಯಕರು ನಿರ್ದೇಕರ ಶ್ರಮವೂ ವ್ಯರ್ಥವಾದಂತೆಯೇ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd