Srikanth | ಟಾಲಿವುಡ್ ಬಿಗ್ ಬಾಸ್ ಯಾರು.. ಕ್ಲಾರಿಟಿ ಕೊಟ್ಟ ಶ್ರೀಕಾಂತ್
ಟಾಲಿವುಡ್ ನಲ್ಲಿ ಟಿಕೆಟ್ ರೇಟ್ ವಿಚಾರದ ಜೊತೆ ಜೊತೆಗೆ ಇಂಡಸ್ಟ್ರೀ ಬಿಗ್ ಬಾಸ್ ಯಾರು ಎಂಬುದು ಸದ್ಯ ಹಾಟ್ ಪಾಪಿಕ್ ಆಗಿದೆ.
ಮಾ ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಸೇರಿದಂತೆ ಸಾಕಷ್ಟು ಸಮಯದಲ್ಲಿ ತೆಲುಗು ಚಿತ್ರರಂದ ಹಿರಿಯಣ್ಣ ಯಾರು ಎಂಬ ವಿಚಾರ ಮುನ್ನಲೆಗೆ ಬರುತ್ತಲೇ ಇದೆ.
ಇದೇ ವಿಚಾರವಾಗಿ ನಟ ಮೋಹನ್ ಬಾಬು ಮತ್ತು ಮೆಗಾಸ್ಟಾರ್ ಚಿರಂಜೀವಿ ಕುಟುಂಬಗಳ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ ಅಂತಾ ಹೇಳಲಾಗುತ್ತಿತ್ತು.
ಆದ್ರೆ ಸ್ವತಃ ಮೆಗಾಸ್ಟಾರ್ ನಾನು ಇಂಡಸ್ಟ್ರಿ ಹಿರಿಯಣ್ಣ ಅಲ್ಲ, ಆದ್ರೆ ಚಿತ್ರರಂಗದಲ್ಲಿ ಯಾರಿಗೇ ಸಮಸ್ಯೆ ಬಂದರೂ ಅಲ್ಲಿ ನಾನು ಇರುತ್ತೇನೆ ಅಂತ ಹೇಳಿದ್ರು.
ಈ ನಡುವೆ ಹೀರೋ ಶ್ರೀಕಾಂತ್ ಇಂಡಸ್ಟ್ರಿಯ ಬಿಗ್ ಬಾಸ್ ಯಾರು ಎಂಬ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.
ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶ್ರೀಕಾಂತ್ ಹೇಳಿದ್ದು.. ನನ್ನ ಪ್ರಕಾರ ತೆಲುಗು ಇಂಡಸ್ಟ್ರೀಗೆ ಚಿರಂಜೀವಿ ಅವರೇ ದೊಡ್ಡವರು.
ಯಾಕೆಂದರೆ ‘ಚಿರಂಜೀವಿ ಬಹಳ ದಿನಗಳಿಂದ ಸಾಕಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ.
ಇಂಡಸ್ಟ್ರಿಯಲ್ಲಿ ಯಾರಿಗೆ ಏನೇ ಸಮಸ್ಯೆ ಇದ್ದರೂ ಮೊದಲು ಚಿರಂಜೀವಿ ಭೇಟಿಯಾಗುತ್ತಾರೆ.
ಅವರನ್ನ ಭೇಟಿಯಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾರೆ. ಜೊತೆಗೆ ಚಿರಂಜೀವಿ ಅವರೂ ಕೂಡ ಬೇಗ ಸ್ಪಂದಿಸುತ್ತಾರೆ.
ದಾಸರಿನಾರಾಯಣ ಅವರ ನಂತರ ಇಂಡಸ್ಟ್ರಿ ಹಿರಿಯಣ್ಣ ಮೆಗಾಸ್ಟಾರ್ ಚಿರಜೀವಿ ಎಂದು ಶ್ರೀಕಾಂತ್ ತಿಳಿಸಿದರು.
ಅಲ್ಲದೇ ಟಿಕೆಟ್ ಬೆಲೆ ವಿಚಾರದಲ್ಲಿ ಸರ್ಕಾರ ಮೊದಲು ಆಹ್ವಾನಿಸಿದ್ದು ಮೆಗಾಸ್ಟಾರ್ ಚಿರಂಜೀವಿ ಅವರನ್ನೇ.
ಇದನ್ನ ನೋಡಿದ್ರೆ ಗೊತ್ತಾಗುತ್ತೆ ಇಂಡಸ್ಟ್ರೀಗೆ ಯಾರು ದೊಡ್ಡವರು ಅಂತಾ ಶ್ರೀಕಾಂತ್ ವಿವರಿಸಿದ್ದಾರೆ.
hero-srikanth-intresting-comments on chiranjeevi saaksha tv